ಈ ಚುನಾವಣೆ ನನ್ನ ರಾಜಕೀಯದಅಳಿವು ಉಳಿವಿನ ಪ್ರಶ್ನೆ: ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29:  ಕಳೆದ ಚುನಾವಣೆಯಲ್ಲಿ ಸೋತಿದ್ದೇನೆ, ಈ ಚುನಾವಣೆ ನನ್ನ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಮತದಾರರು ಅದರಲ್ಲೂ ಸದಾ ನನಗೆ ಆಶಿರ್ವಾದ ಮಾಡುತ್ತಾ ಬಂದಿರುವ ಮಹಿಳೆಯರು ಈ ಚುನಾವಣೆಯಲ್ಲಿ ಮತ ನೀಡಿ ಸಂಸತ್ ಗೆ ಕಳಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ಹೊಸಪೇಟೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ  ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿರುವೆ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ನನ್ನ ಆಡಳಿತ ಅವಧಿಯಲ್ಲಿ  ದುಡಿದಿರುವೆ.
ಇದನ್ನೆಲ್ಲ ಕಂಡಿರುವ ನೀವು ಈಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು, ಈ ದೇಶವನ್ನು ಪರಕೀಯ ಯರಿಂದ ರಕ್ಷಣೆ ಮಾಡಲು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಲು ಬಿಜೆಪಿಗೆ ಮತ ನೀಡಿ ಎಂದರು.
ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯ ದಿನಗಳಿಂದಲೂ ವಿಜಯನಗರ ಜಿಲ್ಲಯ ಜನತೆ ಬಿಜೆಪಿಗೆ ಲೀಡ್ ನೀಡುತ್ತಲೇ ಬಂದಿದ್ದೀರಿ. ಈ ಚುನಾವಣೆ ನಂತರ ನಿಂತು ಹೋಗುವ ಗ್ಯಾರೆಂಟಿಗಳಿಗೆ ಮಹತ್ವ ನೀಡದೆ ದೇಶದ ಹಿತವನ್ನು ಬಯಸಿ ಭಾರತೀಯ ಜನತಾ ಪಾರ್ಟಿಯ ಕಮಲದ ಗುರ್ತಿಗೆತ ನೀಡಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದರು.