ಕಾಂಗ್ರೆಸ್ ಗೆ ಮತ ನೀಡಿದರೆನಿಮ್ಮ ಹಿತ ಕಾಯಲಿದೆ: ನಾಗೇಂದ್ರ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಬಿಜೆಪಿ ಶ್ರೀಮಂತರ ಹಿತ ಕಾದರೆ, ಕಾಂಗ್ರೆಸ್ ಯಾವಾಗಲೂ ಬಡ ಜನರ ಹಿತ ಕಾಯಲಿದೆಂದು ಸಚಿವ ಬಿ.ನಾಗೇಂದ್ರ ಹೇಳಿದರು.
ಅವರು ನಿನ್ನೆ ಸಂಜೆ ತಾಲೂಕಿನ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಮತ್ತು ಡಿ.ನಾಗೇನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಮತಯಾಚನೆ ಮಾಡಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಂಡೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ತುಕರಾಂ ಅವರು ಯಾವುದೆ ಕಳಂಕವಿಲ್ಲದ ವ್ಯಕ್ತಿ.  ಬಡಜನರ   ಬಗ್ಗೆ ಸದಾ ಕಾಳಜಿ ಹೊಂದಿರುವ ತುಕಾರಾಂ ಅವರನ್ನ ಹೆಚ್ಚಿನ ಬಹುಮತಗಳಿಂದ ಗೆಲ್ಲಿಸಬೇಕು ವಿಧಾನಸಭಾ  ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾನ ಮಾಡಿದಂತೆ ಈ ಚುನಾವಣೆಯಲ್ಲೂ ನೀಡಿ ಬಡವರ ಪರವಾದ ಸರ್ಕಾರ ರಚನೆಗೆ ಮುಂದಾಗಿ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತರಲ್ಲ ಎಂದು ಬೊಗಳೇ ಬಿಡುತ್ತಿದ್ದ ಬಿಜೆಪಿಯವರಿಗೆ. ಯೋಜನೆಗಳನ್ನು ಜಾರಿಗೆ ತಂದಿರುವುದು ಸಂಕಟವಾದಂತೆ ಕಾಣಿಸುತ್ತಿದೆ.  ಕಾಂಗ್ರೆಸ್‍ ಕೇಂದ್ರದಕ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲು ವರ್ಷಕ್ಕೆ ಒಂದು ಲಕ್ಷ ರೂ ನೀಡಲಿದೆ. ಕಾಂಗ್ರೆಸ್ ಕೊಟ್ಟ ಮಾತನ್ನು ಎಂದು ಮರೆತಿಲ್ಲ. ಅಷ್ಟೇ ಅಲ್ಲ ಈ ಬಾರಿ‌ನಮ್ಮ ಮೈತ್ರೀಕೂಟ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಲಿದೆಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕಡೆವರೆಗೂ ನಿಮ್ಮ ಜೊತೆ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಟ್ಟಿಗೆ ಇರುವುದಾಗಿ ಸಚಿವ ನಾಗೇಂದ್ರ ಹೇಳಿ ಮತ ನೀಡುವಂತೆ ಮನವಿ ಮಾಡಿದರು.‌
 ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಬಗರ್ ಹುಕುಂ ಕಮಿಟಿ ಅಧ್ಯಕ್ಷ ಹೆಚ್.ತಿಮ್ಮನಗೌಡ, ಗೋನಾಳ್ ವಿರೂಪಾಕ್ಷಗೌಡ,   ಬೆಣಕಲ್ಲು ಬಸವರಾಜ ಗೌಡ, ಪಿ.ಜಗನ್ , ಗೋನಾಳ್ ನಾಗಭೂಷಣಗೌಡ,  ದರೂರು ಪುರುಷೋತ್ತಮಗೌಡ, ಯರ್ರಗುಡಿ ಮುದಿಮಲ್ಲಯ್ಯ, ಶ್ರೀನಾಥ್ ಮೊದಲಾದ  ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.