ರಥದ ಚಕ್ರಕ್ಕೆ ಸಿಲುಕಿ ಮೂವರ ಸಾವು
ಇಂಡಿ,ಏ.29-ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ಸಂಜೆ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶಂಕರಲಿಂಗೇಶ್ವರ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಲಚ್ಯಾಣ ಗ್ರಾಮದ ಸಾಬು ಊರ್ಫ ಸೋಬರಾವ ಮಹಾದೇವ ಶಿಂಧೆ (50), ಅಭಿಷೇಕ ಧನರಾಜ ಮುಜಗೊಂಡ (15) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಗೇಂದ್ರ ಶಿವಾಜಿ ಕಟಕದೊಂಡ ( 50 ) ಅವರನ್ನು ವಿಜಯಪುರದ ಬಿಎಲ್‍ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ.
ತೇರು ಎಳೆಯುವಾಗ ಹಗ್ಗ ಹರಿದಿದ್ದು ತೇರಿನ ರಭಸಕ್ಕೆ ಮೂವರು ತೇರಿನ ಗಾಲಿಯ ಕೆಳಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಇಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ