ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡದ ಡಿ.ಸಿ ವಿರುದ್ಧ ಕಾನೂನು ಸಮರ: ರವೀಂದ್ರ ಸ್ವಾಮಿ
ಕಲಬುರಗಿ,ಏ 29: ಉಚ್ಚ ನ್ಯಾಯಾಲಯವು ನನ್ನ ಹೋರಾಟಕ್ಕೆ ನ್ಯಾಯ ದೊರಕಿಸಿದರೂ ದೇವರು ಕೊಟ್ಟರೂ ಪೂಜಾರಿ ಕೊಡಲಾರ” ಎಂಬ ಗಾದೆ ಮಾತಿನಂತೆ ನಾನು ಹಾಗೂ ನನ್ನ ಕುಟಂಬದವರು ನಿಜವಾದ ಬೇಡ ಜಂಗಮರಾಗಿದ್ದು ನಾನು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೊಂದಿದ್ದರೂ ಸಹ 2023ರಲ್ಲಿ ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಔರಾದ್ ಮೀಸಲು ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ನಾನು ಔರಾದ್ ನಲ್ಲಿ ಸ್ಪರ್ಧಿಸಿದಾಗ ನನ್ನ ಜಾತಿ ಪ್ರಮಾಣ ಪತ್ರ ತಿರಸ್ಕರಿಸಿ ನನ್ನ ಉಮೇದುವಾರಿಕೆ ರದ್ದುಪಡಿಸಿದ್ದರು. ಡಿ.ಸಿ ಆದೇಶ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಗೆ ಮೊರೆ ಹೋದಾಗ 2023 ರ ಆಕ್ಟೋಬರ್ ನಲ್ಲಿ ಕಲಬುರಗಿ ಉಚ್ಛ ನ್ಯಾಯಾಲಯವು ಬೀದರ್ ಡಿ.ಸಿ ಆದೇಶ ತಿರಸ್ಕರಿಸಿ ನನ್ನ ಜಾತಿ ಪ್ರಮಾಣ ಪತ್ರ ಮತ್ತೆ ಪುರಸ್ಕರಿತು. 2024ರ ಕಲಬುರಗಿ ಮೀಸಲು ಲೋಕಸಭೆ ಚುನಾವಣೆಯಲ್ಲಿ ಮತ್ತೆ ತಾನು ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕಲಬುರಗಿ ಲೋಕಸಭೆ ಚುನಾವಣಾಧಿಕಾರಿಗಳು ಹಾಗೂ ಅಲ್ಲಿಯ ಡಿ.ಸಿ ಫೌಜಿಯಾ ತರನೂಮ್ ಅವರು ಬೀದರ್ ಡಿ.ಸಿ ಗೋವಿಂದ ರೆಡ್ಡಿ ಅವರ ಸಲಹೆ ಕೇಳಿ ಇಲ್ಲಿಯೂ ಸಹ ನನ್ನ ಉಮೇದುವಾರಿಕೆ ತಿರಸ್ಕರಿಸಿದ್ದಾರೆ. ಇದನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನನ್ನ ಉಮೇದುವಾರಿಕೆ ಸರಿ ಇದೆ ಎಂದು ಕಲಬುರಗಿ ಉಚ್ಛ ನ್ಯಾಯಾಲಯವು ಆದೇಶ ನೀಡಿದಾಗ ಉದ್ದೇಶಪೂರ್ವಕವಾಗಿ ಮತ್ತೆ ಕಲಬುರಗಿ ಡಿ.ಸಿ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ನನ್ನ ಪರವಾದ ಆದೇಶಕ್ಕೆ ತಡೆ ತಂದು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸಲಾಗಿದೆ ಎಂದು ಕಲಬುರಗಿ ಲೋಕಸಭೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರವೀಂದ್ರ ಸ್ವಾಮಿ ಆರೋಪಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, 2019ರಲ್ಲಿ ಬೀದರ್ ತಹಸಿಲ್ದಾರರು ನನಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರು. ಆದರೆ ಮಾಜಿ ಸಚಿವರು ಹಾಗೂ ಹಾಲಿ ಔರಾದ್ ಶಾಸಕ ಪ್ರಭು ಚವ್ಹಾಣ ಅವರ ಮಾತು ಕೇಳಿ ಉದ್ದೇಶಪೂರ್ವಕವಾಗಿ ನನ್ನ ಜಾತಿ ಪ್ರಮಾಣ ಪತ್ರ ರದ್ದುಪಡಿಸಿದರು. ಕಲಬುರಗಿ ಉಚ್ಚ ನ್ಯಾಯಾಲಯದ ಆದೇಶದನ್ವಯ ಬೀದರ ತಹಸಿಲ್ದಾರರು ಕೂಲಂಕುಷವಾಗಿ ನನ್ನ ಜಾತಿ ಕುರಿತು ವಿಚಾರಣೆ ಮಾಡಿ 2019 ರ ಆಗಸ್ಟ್ 27 ರಂದು ನಾನು ಬೇಡಜಂಗಮ ಜಾತಿಗೆ ಸೇರಿದವನು ಎಂದು ನನಗೆ ಬೇಡಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ ಕೆಲವು ದಲಿತ ಸಂಘಟನೆಗಳ ತಕರಾರು ಕಾರಣ, ಬೀದರ ಜಿಲ್ಲಾಧಿಕಾರಿಗಳು ವಿಚಾರಣೆ ಕೈಗೊಂಡು 2023 ರ ಏಪ್ರಿಲ್ 3 ರಂದು ನನ್ನ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿರುತ್ತಾರೆ. ನಾನು ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಕಲಬುರಗಿ ಉಚ್ಚ ನ್ಯಾಯಾಲಯದಲ್ಲಿ 2023ರಲ್ಲಿ ರಿಟ್ ಅರ್ಜಿ ಸಲ್ಲಿಸಿರುತ್ತೇನೆ. ಮಾನ್ಯ ಉಚ್ಚ ನ್ಯಾಯಾಲಯವು ನನ್ನ ಅರ್ಜಿ ಪುರಸ್ಕರಿಸಿ ಬೀದರ ಜಿಲ್ಲಾಧಿಕಾರಿಯವರ ಆದೇಶ ದಿನಾಂಕ: 03-04-2023 ರದ್ದುಪಡಿಸಿದೆ. ಮತ್ತು ನನಗೆ ತಹಸಿಲ್ದಾರ ಬೀದರರವರು ನೀಡಿರುವ ಜಾತಿ ಪ್ರಮಾಣ ಪತ್ರ ಪುನರ್ ಸ್ಥಾಪನೆ ಆದೇಶ ಹೊರಡಿಸಿರುತ್ತಾರೆ ಎಂದರು.
ಮೇಲೆ ಹೇಳಿದ ಕಾರಣಗಳಿಂದಾಗಿ ನನ್ನ ಬೇಡಜಂಗಮ ಜಾತಿ ಪ್ರಮಾಣ ಪತ್ರವು ಸಿಂಧುವಾಗಿದ್ದು, ಚಾಲ್ತಿಯಲ್ಲಿರುತ್ತದೆ ಮತ್ತು ರದ್ದು ಆಗಿರುವುದಿಲ್ಲ. ಆದಕಾರಣ ನಾನು 2024 ರ ಲೋಕಸಭಾ ಚುನಾವಣೆಯಲ್ಲಿನ ಆಕಾಂಕ್ಷಿಯಾಗಿ ಕಲಬುರ್ಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ (ಕರ್ನಾಟಕದಲ್ಲಿ ಏರಡನೇ ಹಂತದ ಚುನಾವಣೆ)ದಿಂದ ಹಾಗೂ ಮಹಾರಾಷ್ಟ್ರದ ಲಾತುರ್ (ದೇಶದಲ್ಲಿ ಮೂರನೇ ಹಂತದ ಚುನಾವಣೆ) ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ. ಆದರೆ ಇಲ್ಲಿಯ ಜಿಲ್ಲಾ ಚುನಾವಣಾಧಿಕಾರಿಗಳು ನನ್ನ ಉಮೇದುವಾರಿಕೆ ತಿರಸ್ಕರಿಸಿದರು.
ಮಹಾರಾಷ್ಟ್ರದ ಲಾತುರ್ ಕ್ಷೇತ್ರದಲ್ಲಿಯ ನನ್ನ ನಾಮಪತ್ರದಲ್ಲಿಯ ಆಫೀಡವಿಟ್ ನಲ್ಲಾದ ಕೆಲ ತಾಂತ್ರಿಕ ಲೋಪದೋಷಗಳಿಂದಾಗಿ ಅಲ್ಲಿ ನಾಮಪತ್ರ ತಿರಸ್ಕøತಗೊಂಡಿತು ಎಂದು ತಿಳಿಸಿದರು.
ಕಲಬುರ್ಗಿ ಮೀಸಲು ಕ್ಷೇತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ನಾಮಪತ್ರ ಸಲ್ಲಿಸಿದ್ದರೂ ಪ್ರತಿಸ್ಪರ್ಧಿಗಳಲ್ಲಿನ ಕೆಲವರು. ನಾನು ಸಲ್ಲಿಸಿರುವ ನಾಮಪತ್ರದ ವಿರೋಧಿಸಿದ ಕಾರಣಕ್ಕಾಗಿ ದಿನಾಂಕ 03/24/2023 ಜಿಲ್ಲಾಧಿಕಾರಿಗಳವರ ರದ್ದಾದ ಆದೇಶ ಲಗತ್ತಿಸಿ ಕಲಬುರಗಿ ಚುನಾವಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿರುತ್ತಾರೆ. ನಾನು ಚುನಾವಣಾಧಿಕಾರಿಯ ಮುಂದೆ ಉಚ್ಚ ನ್ಯಾಯಾಲಯವು ಜಿಲ್ಲಾಧಿಕಾರಿಗಳ ಆದೇಶ ರದ್ದುಪಡಿಸಿರುವ ಕುರಿತು ಮತ್ತು ನನ್ನ ಜಾತಿ ಪ್ರಮಾಣ ಪತ್ರ ಸಿಂಧುವಾಗಿದ್ದು, ಮತ್ತು ಈವತ್ತು ಕೂಡ ಚಾಲ್ತಿಯಲ್ಲಿರುತ್ತದೆ ಎಂದು ಅದಕ್ಕೆ ದಸ್ತಾವೇಜುಗಳನ್ನು ಸಲ್ಲಿಸಿರುತ್ತೇನೆ. ಆದರೆ ಚುನಾವಣಾಧಿಕಾರಿಯು ಬೀದರ ಜಿಲ್ಲಾಧಿಕಾರಿಗಳ ಜೊತೆ ಶಾಮೀಲಾಗಿ ಮತ್ತು ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ನನ್ನ ಜಾತಿ ಪ್ರಮಾಣ ಪತ್ರ ದೋಷಪೂರಿತವಾಗಿದೆ ಎಂದು ನನ್ನ ನಾಮಪತ್ರವನ್ನು ಕಾನೂನು ಬಾಹಿರವಾಗಿ ತಿರಸ್ಕರಿಸಿರುತ್ತಾರೆ. ಕಲಬುರ್ಗಿ ಚುನಾವಣಾಧಿಕಾರಿಗಳು ಬೀದರ್ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸ್ಪಷ್ಟನೆ ಕೇಳಿದಾಗ ನನ್ನ ವಿಷಯದಲ್ಲಿ ಕಲಬುರ್ಗಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದೆ. ಹೀಗಾಗಿ ಕಲಬುರ್ಗಿ ಚುನಾವಣಾಧಿಕಾರಿಗಳು ನನ್ನ ನಾಮಪತ್ರವನ್ನು ತಿರಸ್ಕರಿಸಿರುತ್ತಾರೆ ಎಂದರು
ಕಲಬುರ್ಗಿ ಚುನಾವಣಾಧಿಕಾರಿಗಳು ನಾಮಪತ್ರ ತಿರಸ್ಕರಿಸಿದ ಆದೇಶದ ವಿರುದ್ಧ ನಾನು ಮತ್ತೆ ಕಲಬುರ್ಗಿ ಪೀಠದಲ್ಲಿ ಪೇಟಿಷನ್(201028/2024) ಸಲ್ಲಿಸಿದೆ. ಆ ಪೇಟಿಷನ್ ಗೆ ಸಂಬಂಧಿಸಿದಂತೆ ಕಲಬುರ್ಗಿ ಹೈಕೋರ್ಟ್ ಏಕಸದಸ್ಯ ಪೀಠ ನಾಮಪತ್ರವನ್ನು ಅಂಗೀಕರಿಸುವಂತೆ ಕಲಬುರಗಿ ಚುನಾವಣಾಧಿಕಾರಿಗೆ 23/ಏಪ್ರಿಲ್/2024 ರಂದು ಆದೇಶಿಸಿತು. ಈ ಆದೇಶವನ್ನು ಅರಿತ ಕಲಬುರ್ಗಿ ಚುನಾವಣಾ ಅಧಿಕಾರಿಗಳು ತನ್ನ ಕೆಲಸಕ್ಕೆ ಕುತ್ತು ಬರುತ್ತದೆನೋ ಎಂಬಂತೆ ತರಾತುರಿಯಲ್ಲಿ ಅದೆ ದಿನ ರಾತ್ರಿ 10.30ಕ್ಕೆ ವಿಭಾಗಿಯ ಪೀಠದಲ್ಲಿ ನನಗೆ ಮಾಹಿತಿ ಕೊಡದೆ ಮತ್ತು ನ್ಯಾಯಾಧೀಶರಿಗೆ ಈಗಾಗಲೇ ವಾಟ್ಸಪ್ ಮೂಲಕ ನನಗೆ ರಿಟ್ ಕಾಫಿ ಕೊಟ್ಟಿರುತ್ತೇನೆ ಎಂದು ಸುಳ್ಳು ಹೇಳಿ ನನ್ನ ಗೈರು ಹಾಜರಿಯಲ್ಲಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ಪಡೆದಿರುತ್ತಾರೆ ಎಂದರು.
ನಾನು ದೇಶದ ನಾಲ್ಕನೇ ಹಂತದ ಚುನಾವಣೆಯ ಕ್ಷೇತ್ರವಾದ ಮಹಾರಾಷ್ಟ್ರದ ಶಿರಡಿ ಪರಿಶಿಷ್ಟ ಮೀಸಲು ಕ್ಷೇತ್ರದಿಂದ 25/ಏಪ್ರಿಲ್/2024 ರಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ನಾಮಪತ್ರ ಸಲ್ಲಿಸುವ ಮೊದಲು ಇ-ಮೇಲ್ ಮೂಲಕ ಜಿಲ್ಲಾಧಿಕಾರಿಗಳು ಬೀದರ್, ಕಲಬುರಗಿ ಚುನಾವಣಾಧಿಕಾರಿಗಳು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಭಾರತದ ಚುನಾವಣಾ ಆಯೋಗದ ಗಮನಕ್ಕೆ ಈ ವಿಷಯ ತರಲಾಗಿತ್ತು.
ಇದೇ ಏಪ್ರಿಲ್ 26 ರಂದು ನನ್ನ ನಾಮಪತ್ರವು ಮಹಾರಾಷ್ಟ್ರದ ಶಿರಡಿಯಲ್ಲಿ ಅಂಗೀಕಾರವಾಗುವುದರ ಮೂಲಕ ಹಲವು ವರ್ಷಗಳ ಕಾಲದಿಂದ ಸತ್ಯವನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಕೊನೆಗೂ ಜಯ ಲಭಿಸಿತು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.ಮಹಾರಾಷ್ಟ್ರದ ಶಿರಡಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ನನ್ನ ಬೇಡಜಂಗಮ ಪ್ರಮಾಣ ಪತ್ರದೊಂದಿಗೆ ಸಲ್ಲಿಸಿದ ನಾಮಪತ್ರ ಪುರಸ್ಕøತಗೊಂಡಿದೆ. ಇದರಿಂದ ನನ್ನ ವಿರುದ್ಧ ಹೋರಾಟ ಮಾಡುವವರಿಗೆ ಉತ್ತರವಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ, ಸುಳ್ಳು ಜಾತಿ ಪ್ರಮಾಣ ಪತ್ರ ಎಂದೆಲ್ಲಾ ಹೇಳಿಕೊಂಡು ಓಡಾಡುವವರಿಗೆ ಬೀದರ ತಹಶೀಲ್ದಾರ ಅವರು ನೀಡಿರುವ ಪ್ರಮಾಣ ಪತ್ರದ ಮೂಲಕ ಉತ್ತರಿಸಿದ್ದೇನೆ ಎಂದರು.
ನ್ಯಾಯವಾದಿ ಸಂಜಯ ಮಠಪತಿ, ಗುರುರಾಜ ಸಾಲಿಮಠ, ರಮೇಶ ಬೀದರಕರ್, ಸಿದ್ರಾಮಯ್ಯ ಸ್ವಾಮಿ ಸೇರಿದಂತೆ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.