ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಅಗತ್ಯ:ಪಾಟೀಲ
ತಾಳಿಕೋಟೆ:ಏ.29: ಇಂದಿನ ವಿಧ್ಯಾರ್ಥಿಗಳಲ್ಲಿ ಓದು ಬರಹದ ಜೊತೆಗೆ ಸ್ಪರ್ದಾತ್ಮಕ ಪರಿಕ್ಷೆಗಳನ್ನು ಎದುರಿಸುವ ಮನೋಭಾವನೆ ಅಗತ್ಯವಾಗಿದೆ ಅಂತಹ ಸ್ಪರ್ದಾತ್ಮಕ ಪರಿಕ್ಷೆಗಳನ್ನು ನಡೆಸುವ ಮೂಲಕ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು ದಾವಣಗೇರಿಯ ಪ್ರಗ್ಯಾ ಐಐಟಿ ಮೇಡಿಕಲ್ ಅಕಾಡೆಮಿ ಮಾಡುತ್ತಾ ಸಾಗಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಹೇಳಿದರು.
ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾ ವಿದ್ಯಾಲಯ ಹಾಗೂ ಪ್ರಗ್ಯಾ ಐಐಟಿ ಮೇಡಿಕಲ್ ಅಕಾಡೆಮಿ ದಾವಣಗೇರಿ ಇವರ ವತಿಯಿಂದ ಪಿಯುಸಿ ಸೈನ್ಸ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಟ್ಯಾಲೆಂಟ್ ಸರ್ಚ್ ಎಕ್ಸಾಮ್ 2024 ಪರಿಕ್ಷಾ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಹುಟ್ಟುವಾಗ ಏನು ಇರುವದಿಲ್ಲಾ ಹುಟ್ಟಿದ ಮೇಲೆ ಹೆಸರು ಬರುತ್ತದೆ ಆ ಹೆಸರು ಚೀರಸ್ಮರಣಿಯವಾಗಿ ಹುಳಿಯುವಂತೆ ಬಧುಕಬೇಕು ಸ್ಪರ್ದೆಯಲ್ಲಿ ಸೋಲು ಗೆಲುವು ಸಹಜವಾಗಿದೆ ಅದನ್ನು ಮೆಟ್ಟಿ ನಿಲ್ಲುವಂತಹ ಸ್ಪರ್ದೆಗಳಲ್ಲಿ ಒಂದಾಗಿರುವ ಸ್ಮರ್ದಾತ್ಮಕ ಪರಿಕ್ಷೆಗಳನ್ನು ಎದುರಿಸಿ ದೇಶದ ಇತಿಹಾಸ ಪುಟಗಳಲ್ಲಿ ಉಳಿಯುವಂತಹ ಕಾರ್ಯ ವಿಧ್ಯಾರ್ಥಿಗಳು ಮಾಡಬೇಕು ಪಾಲಕರು ಮಕ್ಕಳಿಗೆ ಓದು ಬರಹ ಕಲಿಸಿದರೆ ಸಾಲದು ಇಂತಹ ಸ್ಪರ್ದಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೇರೆಪಿಸುವಂತಹ ಕೆಲಸ ಮಾಡಬೇಕು ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾವಣಗೇರಿಯ ಪ್ರಗ್ಯಾ ನೀಟ್-ಮೇಡಿಕಲ್ ಅಕಾಡೆಮಿಯ ಪ್ರಗ್ಯಾ ನೀಟ್ & ಮೆಡಿಕಲ್ ಅಕಾಡೆಮಿ ದಾವಣಗೆರೆಯ ನಿರ್ದೇಶಕ ಸಾಗರ ನಯ್ಯಮ್ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ವಿಧ್ಯಾರ್ಥಿಗಳು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ ಅವರನ್ನು ಸರಿ ದಾರಿಗೆ ತರುವ ಕಾರ್ಯ ಮಾಡಬೇಕಾಗಿದೆ ಇಂತಹ ಸ್ಪರ್ದಾತ್ಮಕ ಪರಿಕ್ಷೆಗಳಲ್ಲಿ ಪಾಲ್ಗೊಳ್ಳುವದರೊಂದಿಗೆ ಉನ್ನತ ಶಿಕ್ಷಣದ ಕಡೆಗೆ ವಿಧ್ಯಾರ್ಥಿಗಳು ದಾಪುಗಾಲು ಹಾಕಬೇಕು ನೀಟ್ ಹಾಗೂ ಜೆಇಇ, ಸಿಇಟಿ ಕೋಚಿಂಗ್ ನೀಡಲು ತಾಳಿಕೋಟೆಯ ಉತ್ತಮ ಶಿಕ್ಷಣ ಸಂಸ್ಥೆಯಾದ ಎಚ್.ಎಸ್.ಪಾಟೀಲ ಪದವಿಪೂರ್ವ ಕಾಲೇಜು ಮುಂದಾಗಿದೆ ಬಡ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಇಲ್ಲಿಯವರೆಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆಯು ಇಂದು ಸ್ಪರ್ದಾತ್ಮಕ ಪರಿಕ್ಷೆಯ ಕಡೆಗೆ ಹೆಜ್ಜೆ ಇಟ್ಟಿರುವದು ಶ್ಲಾಘನೀಯವಾಗಿದೆ ಮತ್ತು ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೇರೆಪಿಸಿದಂತಾಗಿದೆ ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಬೆಂಗಳೂರಿನ ಮೈಪಾಲ ಸಂಸ್ಥೆಯ ಎಚ್‍ಓಡಿ ರಮೇಶ ಬಿ.ಕೆ. ಅವರು ಮಾತನಾಡಿ ಸ್ಪರ್ದಾತ್ಮಕ ಜಗತ್ತಿನಲ್ಲಿ ಇಂತಹ ಪರಿಕ್ಷೆಗಳು ಅಗತ್ಯವಾಗಿದೆ ಬಡವ, ಶ್ರೀಮಂತರೆನ್ನದೇ ಎಲ್ಲರನ್ನು ಸಮಾನರನ್ನಾಗಿ ಕರೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡಲು ಎಚ್.ಎಸ್.ಪಾಟೀಲ ಶಿಕ್ಷಣ ಸಂಸ್ಥೆಯು ಯಾವಾಗಲು ಮುಂದೆ ಸಾಗಿದೆ ನೀಟ್-ಜೆಇಇ-ಸಿಇಟಿ ಕೋಚಿಂಗ್‍ಗಾಗಿ ದೂರದ ಊರಿಗೆ ಅಲೆದಾಡುವದನ್ನು ತಪ್ಪಿಸಲು ಕಾಲೇಜಿನಲ್ಲಿಯೇ ಉತ್ತಮ ನುರಿತ ತಜ್ಞ ಶಿಕ್ಷಕರೊಂದಿಗೆ ಮುಂದಾಗಿರುವದು ಸಂತಸದ ಸಂಗತಿಯಾಗಿದೆ ವಿಧ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸ್ಪರ್ದಾತ್ಮಕ ಪರಿಕ್ಷೆ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡು ದೇಶದ ಉನ್ನತ ಸ್ಥಾನಕ್ಕೆ ತಲುಪಬೇಕೆಂದರು.
ಇದೇ ಸಮಯದಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ.97 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ ಕು.ಭವಾನಿ ಘೋರ್ಪಡೆ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತ್ತಲ್ಲದೇ ಹಾಗೂ ಎಚ್.ಎಸ್.ಪಾಟೀಲ ಪ.ಪೂ.ಕಾಲೇಜ್‍ನ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಚಿಕ್ಕಮಠ, ಶಿವರಾಜ ಪೂಜಾರಿ, ಝಮೀರಾ ಅವಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚೀನ ಎಚ್ ಪಾಟೀಲ ಅವರು ವಹಿಸಿದ್ದರು. ಸ್ಪರ್ದಾತ್ಮಕ ಪರಿಕ್ಷೆಯಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ಸಮಯದಲ್ಲಿ ಬಿ.ಕೆ.ಅಕಾಡೆಮಿಯ ಡೀನ ಐಐಟಿ ಮಾಸ್ಟರ್ ರಮೇಶ, ರಘುನಂದನ ಪೈ ಅವರು ಸ್ಪರ್ದಾತ್ಮಕ ಪರಿಕ್ಷೆಗೆ ಕುಳಿತ ವಿಧ್ಯಾರ್ಥಿಗಳಿಗೆ ಮತ್ತು ಪೊಷಕರಿಗೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಏಕೆ ಆಯ್ಕೆ ಮಾಡಿಕೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭಗಳ ಬಗ್ಗೆ ವಿವರಿಸಿದರು.
ವೇದಿಕೆಯ ಮೇಲೆ ಕಿರಣ ಎಚ್ ಪಾಟೀಲ. ರವಿ ಪಾಟೀಲ, ಐ ಮಾಸ್ಟರ್ ಅಕಾಡೆಮಿಯ ನಿರ್ದೇಶಕರಾದ ವಿರೇಶ ಬಳ್ಳೂರ, ಮೈಪಾಲ ಸಂಸ್ಥೆಯ ಮಯೂರ, ಮೊದಲಾದವರು ಉಪಸ್ಥಿತರಿದ್ದರು.
ಶೃತಿ ಕೊಳೂರ ಪ್ರಾರ್ಥಿಸಿದರು. ಎಸ್.ವ್ಹಿ.ಜಾಮಗೊಂಡಿ ಸ್ವಾಗತಿಸಿ ಶಿಕ್ಷಕ ಬಿ.ಆಯ್. ಹಿರೇಹೊಳಿ ನಿರೂಪಿಸಿ ವಂದಿಸಿದರು.