ಕೂಡಗಿ-ಅಗ್ನಿ ಸೇವಾ ಸಪ್ತಾಹ ಸಮಾರೋಪ
ಕೊಲ್ಹಾರ:ಏ.29: ಅಗ್ನಿ ಅವಘಡವಾದಗ ಅನುಸರಿಸಬೇಕಾದ ಅಗ್ನಿ ಸುರಕ್ಷತಾ ಅಂಶಗಳ ಕುರಿತು ಡಿ ವಾಯ್ ಕಮಾಂಡೆಂಟ್ ನರೇಂದ್ರ ಕುಮಾರ್ ಅಗ್ನಿ ವಿವರಿಸಿದರು.
ಕೂಡಗಿ NTPC ಯ CISF ಫೈರ್‍ನಿಂದ ಹಮ್ಮಿಕೊಂಡ ಅಗ್ನಿ ಸೇವಾ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್ ಓ ಪಿ ಬಿ ಎನ್ ಝಾ ಮಾತನಾಡಿ ಪ್ರತಿ ಹಳ್ಳಿಗಳಲ್ಲಿ ಮತ್ತು ಹತ್ತಿರದಲ್ಲಿ ಬೆಂಕಿ ಜಾಗೃತಿ ಮೂಡಿಸುತ್ತಿರುವ ಅISಈ ಕಾರ್ಯ ಶ್ಲಾಘನೀಯ ಎಂದರು.
ಅಗ್ನಿಶಾಮಕ ಸೇವಾ ಸಲಕರಣೆಗಳ ಪ್ರದರ್ಶನ ಆಯೋಜಿಸಲಾಗಿತ್ತು. ಅಗ್ನಿಶಾಮಕ ಮತ್ತು ರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ NTPC ಹಾಗೂ CISF ನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.