ಚುನಾವಣೆಯಲ್ಲಿ ಪ್ರತಿಯೊಬ್ಬರು ಹಕ್ಕು ಚಲಾಯಿಸಿ
ಭಾಲ್ಕಿ:ಏ.29: ಮತದಾನದ ಮಹತ್ವ ಸಾರಲು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು.
ತಾಲೂಕು ಪಂಚಾಯತಿ ಆವರಣದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ತಹಸೀಲ್ದಾರ ಶ್ರೀಯಂಕಾ ಧನಾಶ್ರೀ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾವ ಕೌಟಗೆ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ಬೀದಿ, ರಸ್ತೆ, ವೃತ್ತಗಳ ಮೂಲಕ ಪುರಸಭೆ ಕಚೇರಿಗೆ ಸಾಗಿ ಜಾಗೃತಿ ಜಾಥಾ ಸಮಾವೇಶಗೊಂಡಿತು. ನಂತರ ಪುರಸಭೆ ಕಚೇರಿಯಲ್ಲಿ ಬಿಎಲ್‍ಓ ರೇಖಾ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಓ ಹಣಮಂತರಾವ ಕೌಟಗೆ ಪ್ರತಿಜ್ಞೆ ವಿಧಿ ಬೋಧಿಸಿ, ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಶಂಕರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ್, ತಾಪಂ ಎಡಿ ಸೂರ್ಯಕಾಂತ ಬಿರಾದಾರ, ವ್ಯವಸ್ಥಾಪಕ ವಿನೋದ ರೆಡ್ಡಿ ಸೇರಿದಂತೆ ಹಲವರು ಇದ್ದರು.