ಯೋಗ್ಯ ನಾಯಕನನ್ನು ಆರಿಸಿ ಬಲಿಷ್ಠ ರಾಷ್ಟ್ರಕ್ಕೆ ಕೈಜೊಡಿಸಿ ಪೂಜಾ ಪಟ್ನೆ
ಬೀದರ : ಏ.29:ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಭಾರತವನ್ನು ಗಣರಾಜ್ಯ ಎಂದು ಕರೆದಿದ್ದಾರೆ. ಅಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಸರ್ಕಾರ, ಅಂದಮೇಲೆ ಆ ಸರ್ಕಾರ ಆರಿಸುವ ಜವಾಬ್ದಾರಿ ಭಾರತದ ಪ್ರಜೆಗಳಾದ ನಮ್ಮ ಮೇಲಿದೆ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಚುನಾವಣೆ ಮುಗಿದಿದ್ದು ಇನ್ನೇನು 2ನೇ ಹಂತದ ಚುನಾವಣೆಗೆ ಸಿದ್ಧತೆ ನಡೆದಿದೆ. ಎಲ್ಲೆಡೆ ಚುನಾವಣೆಯ ಪ್ರಚಾರಗಳು ಬಿಸಿಲಿನಂತೆ ಚುರುಕಾಗಿದೆ, ಬರಿ ಚುನಾವಣೆ ಬಂದಾಗ ಅಷ್ಟೇ ಕೈಜೋಡಿಸುವ ನಾಯಕನನ್ನು ಬಿಟ್ಟು ಸದಾ ಜನ ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳುವ ನಾಯಕನನ್ನು ಆರಿಸಿ. ದುಡ್ಡಿಗಾಗಿ ನಿಮ್ಮ ಮತ ಮಾರಿಕೊಳ್ಳಬೇಡಿ ಬದಲಿಗೆ ನಿಮ್ಮೊಂದಿಗಿದ್ದು ನಿಮ್ಮ ಸಮಸ್ಯೆ ಆಲಿಸುವ ನಾಯಕನನ್ನ ಆರಿಸಿ ಅಂದಾಗ ಮಾತ್ರ ಭಾರತ ಅಭಿವೃಧ್ಧಿ ರಾಷ್ಟ್ರವಾಗಲು ಸಾಧ್ಯ, ಅದಕ್ಕಾಗಿಯೇ ಪ್ರತಿಯೊಬ್ಬ ಭಾರತೀಯ ನಾಗರಿಕನ ಮತದಾನದ ವಯಸ್ಸು 18 ಎಂದಿದೆ, ಅಂದರೆ ಒಬ್ಬ ಪ್ರಜೆಗೆ ಸರ್ಕಾರವನ್ನು ಆಲೋಚಿಸುವ ಹಾಗೂ ನಾಯಕನ ಕರ್ತವ್ಯ ನಿಷ್ಠೆಯನ್ನು ಮನಗಾಣಗಿಳುವ ಮನಸ್ಥಿತಿ ಇರುತ್ತದೆ ಎಂದು ಸಂವಿಧಾನದಲ್ಲಿ 18 ವಯಸ್ಸಾಗಬೇಕು ಎಂದು ಸಿಮಿತಮಾಡಿದ್ದಾರೆ.
ಮತದಾರರು ಯಾವುದೆ ಕಾರಣಕ್ಕು ಪಕ್ಷ ಎಂದು ನೋಡಬೇಡಿ ಬದಲಾಗಿ ಯೋಗ್ಯ ನಾಯಕನನ್ನು ನೋಡಿ, ನಾವು ಬಲಿಷ್ಠ ವ್ಯಕ್ತಿ ಹಾಗೂ ಸರ್ಕಾರವನ್ನು ಆರಿಸಿದರೆ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರ ಮತದಾನ ಕಡ್ಡಾಯವಾಗಲಿ, ಇದು ಭಾರತದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.
ಸಮಾಜದ ಆಗುಹೋಗುಗಳನ್ನು ಪರಿಗಣಿಸಿ ಯಾವುದೇ ಪಕ್ಷಗಳಾಗಲಿ ಕಳೆದ ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿಯನ್ನು ಗಮನಿಸಿ ಮತ ಹಾಕಿ.
ವಿಶ್ವದ ದೊಡ್ಡ ಪ್ರಜಾ ಪ್ರಭುತ್ವದಲೊಂದಾದ ಭಾರತದ ಚುನಾವಣಾ ಹಬ್ಬದಲ್ಲಿ ಎಲ್ಲಾ ಪ್ರಜೆಗಳು ಕಡ್ಡಾಯವಾಗಿ ಮತ ಹಾಕೋಣ ಸದೃಢ ಬಲಿಷ್ಠ ಸರ್ಕಾರವನ್ನು ರಚಿಸಲು ಮುಂದಾಗೋಣ.
ನಮ್ಮ ಮತ ನಮ್ಮ ಸರ್ಕಾರ
ಸಿವಿಲ್ ಇಂಜಿನಿಯರ್ ಬೀದರ