ಕೆಬಿಎನ್ ವಿವಿ : ಬಿ ಎಲ್ ಎಸ್ ಕಾರ್ಯಾಗಾರ
ಕಲಬುರಗಿ:ಏ.29: ಕೆಬಿಎನ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನಗಳ ಫ್ಯಾಕಲ್ಟಿ ಸ್ಕಿಲ್ಸ್ ಲ್ಯಾಬ್ ಬೇಸಿಕ್ ಲೈಫ್ ಸಪೆÇೀರ್ಟ್ ಕೋರ್ಸ್‍ನ ಕಾರ್ಯಾಗಾರ ವನ್ನು ಐಎಪಿ ಕಲಬುರಗಿ ಸಹಯೋಗದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ಮೆಡಿಕಲ್ ಡೀನ ಡಾ. ಸಿದ್ಧೇಶ ಸಿರವಾರ ಮಾತನಾಡಿ, ಕೆಬಿಎನ್ ವಿವಿಯ ಮೆಡಿಕಲ್ ನಿಕಾಯದ ಎಲ್ಲ ವಿಭಾಗಗಳು ಅನೇಕ ಉಪಯುಕ್ತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಮಾಹಿತಿ ಒದಗಿಸುತ್ತಿದೆ ಎಂದರು. ಈ ಕಾರ್ಯಗಾರದಲ್ಲಿ 36 ಪಿಜಿ ವಿದ್ಯಾರ್ಥಿಗಳು ಮತ್ತು 4 ಜನ ಸಿಬ್ಬಂದಿ ಭಾಗವಹಿಸಿದ್ದರು. ಮೂಲಭೂತ ಜೀವನಕ್ಕೆ ಬೇಕಾದ ಕೌಶಲ್ಯಗಳು ಅತಿ ಅವಶ್ಯ. ಕೇವಲ ವೈದ್ಯರಷ್ಟೆ ಅಲ್ಲದೇ ಬೇರೆಯವರು ಇದನ್ನು ಅರಿತುಕೊಂಡಲ್ಲಿ ಜೀವ ರಕ್ಷಣೆ ಸಾಧ್ಯ ಎಂದರು. ಮುಂಬರುವ ದಿನಗಳಲ್ಲಿ ಇದೆ ವಿಷಯವಾಗಿ ದೊಡ್ಡ ಮಟ್ಟದ ಕಾರ್ಯಗಾರವನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ ಎಂದರು.
ವಿದ್ಯಾರ್ಥಿಗಳಿಗೆ ಮೂಲಭೂತ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಹೇಳಿಕೊಟ್ಟು ಹಸುಗೂಸು ಮತ್ತು ವಯಸ್ಕರ ಜೀವ ರಕ್ಷಣೆಯಲ್ಲಿ ಅದರ ಅವಶ್ಯಕತೆ ಕುರಿತು ಪ್ರಾಯೋಗದ ಮೂಲಕ ತರಬೇತಿ ನೀಡಲಾಯಿತು.
ಕೆಬಿಎನ್ ವಿವಿಯ ಸಂಶೋಧನ ಉಪನಿರ್ದೇಶಕರಾದ ಡಾ. ಗುರುಪ್ರಸಾದ ಮಾತನಾಡುತ್ತ ಇಂತಹ ಕಾರ್ಯಗಾರಗಳನ್ನು ವಿದ್ಯಾರ್ಥಿಳು ಸಧ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಈ ಕಾರ್ಯಕ್ರಮಕ್ಕಾಗಿ ಶ್ರಮಪಟ್ಟ ಎಲ್ಲ ಸಮಿತಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಡಾ. ಸಿದ್ದಲಿಂಗ್ ಚೆಂಗಟಿ ವೈದ್ಯಕೀಯ ಅಧೀಕ್ಷಕ ಮತ್ತು ರಾಷ್ಟ್ರೀಯ ತರಬೇತುದಾರ ಬಿ. ಎಲ್ ಎಸ್ ಕೆಬಿನ್ ಬೋಧನೆ ಮತ್ತು ಜನರಲ್ ಆಸ್ಪತ್ರೆ, ಡಾ.ಶಿಲ್ಪ ಪ್ರಧಾನ್ ಶೈಕ್ಷಣಿಕ ಸಂಯೋಜಕರು, ಡಾ.ಸುಷ್ಮಾ ಡಿ.ಎಸ್ ಇಂಚಾರ್ಜ್ ಸ್ಕಿಲ್ ಲ್ಯಾಬ್,
ಡಾ. ಚರಣರಾಜ್ ಮುಖ್ಯಸ್ಥರು ಪೀಡಿಯಾಟ್ರಿಕ್ಸ್ ರಾಷ್ಟ್ರೀಯ ತರಬೇತುದಾರ ಬಿ ಎಲ್ ಎಸ್,
ಡಾ. ರಾಘವೇಂದ್ರ ವನಕಿ, ಡಾ.ಸಿದ್ದು ಚಾರ್ಕಿ ಡಾ ಪ್ರಕಾಶ್ ಜೆಪಿ ಡಾ.ರೇವಣಸಿದ್ದಪ್ಪ ಬಿ,
ಡಾ.ವಿನೋದ್ ಉಪಳಾಂವಕರ್ ಡಾ. ಬಸವರಾಜ್ ಪಾಟೀಲ್ ಡಾ. ಕಿರಣ್ ಹೊಸಗೌಡ ಡಾ. ಯಲಗೂರ ಸ್ವಾಮಿ ಹಾಜರಿದ್ದರು.