ನಮ್ಮ ನಡೆ ಮತಗಟ್ಟೆ ಕಡೆ” ಕಾರ್ಯಕ್ರಮ ಧ್ವಜಾರೋಹಣ ಮತ್ತು ಮಹಿಳಾ ಜಾಗೃತಿ ಜಾಥಾ
ಕಲಬುರಗಿ:ಏ.29:ಮೇ 7 ರಂದು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ತಾಲೂಕು ದಂಡಾಧಿಕಾರಿಗಳು ತಹಶಿಲ್ದಾರ ಸಂಜೀವ ಕುಮಾರ ದಾಸರ ಧ್ವಜಾರೋಹಣ ನೆರವೇರಿಸಿ ಮತ್ತು ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಶೇಕಡ 100 ರಷ್ಟು ಮತದಾನ ಆಗಬೇಕು ಪ್ರತಿಯೊಬ್ಬರೂ ತಮ್ಮ ಮತದಾನದಿಂದ ಹಿಂದೆ ಉಳಿಯಬಾರದು ಎಂದು ನೆರೆದ ಜನರಿಗೆ ಕರೆ ನೀಡಿದರು.
ನಂತರ ಮಹಿಳೆಯರಿಂದ ಮತದಾನ ಜಾಗೃತಿ ಜಾಥ ಕಾರ್ಯಕ್ರಮ ನಡೆಯಿತು, ತಹಶಿಲ್ದಾರರ ಕಚೇರಿಯಿಂದ, ಅಂಬೇಡ್ಕರ್ ವೃತ್ತ, ಬಸವೇಶ್ವರ ಸರ್ಕಲ್, ಘತ್ತರಗಾ ರಸ್ತೆ, ಸಿದ್ದರಾಮೇಶ್ವರ ಮಠ, ಬಸ್ ನಿಲ್ದಾಣ, ಪಿ,ಆರ್,ಇ,ಡಿ ಕಛೇರಿಯಲ ಮೈದಾನದ ವರೆಗೆ ಮಹಿಳೆಯರಿಂದ ಮತದಾನ ಮತ್ತು ಚುನಾವಣೆ ಬಗ್ಗೆ ಜಾಗೃತಿ ಜಾಥ, ಚುನಾವಣಾ ವಾಹನ ಪ್ರಚಾರದ ಮೂಲಕ ಹಾಡುಗಳು, ಮಹಿಳೆಯರಿಂದ ಘೋಷ ವಾಖ್ಯಗಳನ್ನು ಕೂಗುವ ಮುಲಕ ಕಾರ್ಯಕ್ರಮ ನಡೆಯಿತು. ಮತ್ತು
ಮಹಿಳೆಯರಿಂದ ಪ್ರತಿಜ್ಞಾವಿಧಿ ಮತ್ತು ಖಚಿತ ಮತದಾನದ ಬಗ್ಗೆ ಸಹಿ ಸಂಗ್ರಹ ಜಾಥ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ,ಸಹಾಯಕ ನಿರ್ದೇಶಕ ರಮೇಶ ಪಾಟೀಲ, ತಾಲೂಕ ಯೋಜನಾಧಿಕಾರಿ ಡಾ.ರೇಣುಕಾ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲೆಯ ಸಿಬ್ಬಂದಿ ಅಕ್ಷರ ದಾಸೋಹ ಸಿಬ್ಬಂದಿ, ಮತ್ತು ಎನ್ ಆರ್.ಎಲ್ ಎಂ. ಎಂ.ಬಿ.ಕೆ ಸೇರಿದಂತೆ ತಾಲೂಕ ಪಂಚಾಯತಿ ಸಿಬ್ಬಂದಿ, ಸಿದ್ದಮ್ಮ, ಮಲಕ್ಕಮ್ಮ, ಸಿದ್ದು, ನಿಂಗೊಡ ಉಪಸ್ಥಿತರಿದ್ದರು