ಆಳಂದ ಮತದಾನ ಜಾಗೃತಿ ಜಾಥಾ
ಆಳಂದ: ಏ 29: ಪಟ್ಟಣದಲ್ಲಿ ತಾಲೂಕು ಆಡಳಿತ , ತಾಲೂಕು ಪಂಚಾಯತ, ಪುರಸಭೆ ಮತ್ತು ಆಳಂದ ಸೈನಿಕರ ಸಂಘದ ಸಂಯೋಗದಲ್ಲಿ ಇಂದು ಸರಕಾರಿ ಪದವಿ ಪೂರ್ವ ಕಾಲೇಜು ಆಳಂದದಲ್ಲಿ ಚುನಾವಣಾ ಧ್ವಜಾರೋಹಣ ಮಾನ್ಯ ಆರ್. ಒ. ರವರು ನೆರವೆರಿಸಿದರು. ತದನಂತರ ಎಲ್ಲರೂ ಕಡ್ಡಾಯವಾಗಿ ಮೇ 7ನೇ ತಾರೀಖಿಗೆ ನಿಮ್ಮ ನಿಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಲು ತಿಳಿಸಿದರು, ಪಟ್ಟಣದಲ್ಲಿ ಸೈನಿಕ ಶಾಲೆ ತರಬೇತಿ ಶಿಬಿರಾರ್ಥಿಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮತದಾನ ಜಾಗೃತಿ ಜಾಥಾ ಕಾಲ್ನಡಿಗೆಯಲ್ಲಿ ಹಮ್ಮಿಕೊಂಡು ಮಾನ್ಯ ತಹಶಿಲ್ದಾರರು . ಕಾರ್ಯನಿರ್ವಾಹಕ ಅಧಿಕಾರಿಗಳು,ತಾ.ಪಂ. ಆಳಂದ , ಪುರಸಭೆ ಮುಖ್ಯಾಧಿಕಾರಿ , ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು , ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು,ಆಳಂದ ಸೈನಿಕರ ಅಭಿವೃದ್ಧಿಸಂಘದ ಅಧ್ಯಕ್ಷರು, ಮುಂತಾದವರು ಉಪಸ್ಥಿತರಿದ್ದರು