ಪ್ರಧಾನಿ ಮೋದಿಯಂತಹ ಸುಳ್ಳುಗಾರ ಜೀವಮಾನದಲ್ಲಿ ನೋಡಿಲ್ಲ-ಸಿಎಂ
ಸಂಜೆವಾಣಿ ವಾರ್ತೆ
ಸಿಂಧನೂರು.ಏ.೨೯- ನನ್ನ ನಲವತ್ತೈದು ವರ್ಷಗಳ ರಾಜಕೀಯ ಅನುಭವದಲ್ಲಿ ಇಷ್ಟೊಂದು ಸುಳ್ಳುಗಳನ್ನು ಹೇಳುವ ಪ್ರಧಾನಿಯನ್ನು ಜೀವಮಾನದಲ್ಲಿ ನೋಡಿಲ್ಲ ಮೋದಿ ಅವರು ಹಸಿ ಸುಳ್ಳುಕಾರ. ನಾವು ಕೊಟ್ಟ ಗ್ಯಾರಂಟಿಗಳನ್ನಾಧರಿಸಿ ನಿಮ್ಮಲ್ಲಿ ಮತ ಕೇಳುತ್ತೆವೆ ಅಭ್ಯರ್ಥಿ ರಾಜಶೇಖರ ಹಿಟ್ನಾಳರನ್ನು ನಿಮ್ಮಗಳ ಸೇವೆಗೈಯಲು ಆಶಿರ್ವದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.
ಸಿಂಧನೂರಿನ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು, ಮಸ್ಕಿ, ಸಿರಗುಪ್ಪ ಕುಷ್ಟಗಿ ,ಕನಕಗಿರಿ ಕ್ಷೇತ್ರಗಳಿಂದ ಹೆಚ್ಚು ಬಹುಮತ ಪಡೆಯುತ್ತೆವೆಂಬ ನಂಬಿಕೆ ಇದೆ.ಹಾಲಿ ಸಂಸದ ಸಂಗಣ್ಣ ಕರಡಿಗೆ ಸಕಾರಣವಿಲ್ಲದೇ ಟಿಕೇಟ್ ತಪ್ಪಿಸಿದರು.ನರೇಂದ್ರ ಮೋದಿಯವರು ಭಾವನಾತ್ಮಕ ವಿಚಾರಗಳಿಂದ ಮತ ಸೆಳೆಯಲೆತ್ನಿಸುತ್ತಿದ್ದಾರೆ.ಕೊಟ್ಟ ಭರವಸೆಗಳನ್ನು ಈಡೆರಿಸದಿರುವದರಿಂದ ಮತ ಕೇಳಲು ನೈತಿಕತೆ ಇಲ್ಲ.
‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯಿಂದ ಸರ್ವೆ ಮಾಡಲಾಗಿದ್ದು, ಬಿಜೆಪಿ ದೇಶದಲ್ಲಿ ೨೦೦ ಸೀಟು ಮಾತ್ರ ಗೆಲ್ಲುತ್ತದೆಂಬ ವರದಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಭಯ ಹುಟ್ಟಿಸಿದೆ ಅದಕ್ಕೆ ದೇಶದಲ್ಲಿ ನೂರಕ್ಕು ಅಧಿಕ ಹಾಗೂ ರಾಜ್ಯದಲ್ಲಿ ೧೨ ಜನ ಹಾಲಿ ಸಂಸದರಿಗೆ ಟಿಕೇಟ್ ತಪ್ಪಿಸಿ ಬೇರೆಯವರಿಗೆ ನೀಡಿದ್ದಾರೆ.
ಮೋದಿ ಚುನಾವಣೆ ಪ್ರಚಾರ ಸಮಾವೇಶದಲ್ಲಿ ನಿರುದ್ಯೋಗ, ಹಣದುಬ್ಬರ, ರೈತರ, ಮಹಿಳೆಯರ ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಲ್ಲ. ಎಲ್ಲಿಯೂ ಮೊದಲು ಕೊಟ್ಟ ಭರವಸೆ ಗಳ ಬಗ್ಗೆ ಮಾತನಾಡುತ್ತಿಲ್ಲ.೧೦೦ ದಿನಗಳಲ್ಲಿ ೧೫ ಲಕ್ಷ ಕಪ್ಪು ಹಣ, ನಿರುದ್ಯೋಗ ಯುವಕರಿಗೆ ೨ ಕೋಟಿ ಉದ್ಯೋಗ ಹೇಳಿದ್ರು ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಾಗಿತ್ತು ಆದ್ರೆ ೨೦ ಲಕ್ಷ ಉದ್ಯೋಗ ಕೂಡ ಸೃಷ್ಟಿ ಸಿಲ್ಲ ಪಕೋಡ ಮಾರಾಟ ಮಾಡಿ ಎನ್ನುತ್ತಾರೆ, ರೈತರ ಆದಾಯ ದುಪ್ಪಟ್ಟು ಆಗಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ಇವೆಲ್ಲಾ ಪ್ರಧಾನಿಗಳ ದೊಡ್ಡ ಸುಳ್ಳು ಗಳು ಎಂದರು.
ಹಿಂದುಳಿದ ವರ್ಗಗಳ ಮೀಸಲಾತಿ ಮುಸ್ಲಿಮರಿಗೆ ಕೊಡುತ್ತಿದ್ದಾರೆನ್ನುವ ಹಸಿ ಸುಳ್ಳು ಹೇಳುತ್ತಿದ್ದಾರೆ ಮೀಸಲಾತಿ ವಿಷಯದಲ್ಲಿ ಯಾವುದೇ ಬದಲಾವಣೆಗೆ ನಾವು ಮುಂದಾಗಿಲ್ಲ. ೩೦ ವರ್ಷಗಳ ಹಿಂದೆನೇ ಮುಸ್ಲಿಮರಿಗೆ ಮಿಸಲಾತಿ ಇದೆ.ಇದು ದಲಿತರನ್ನು, ಹಿಂದುಳಿದ ವರ್ಗಗಳನ್ನು ಮುಸ್ಲಿಂರ ವಿರುದ್ದ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರಿಗೆ ಇದ್ದ ೪% ಮೀಸಲಾತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದು ಮಾಡಿದ್ದರು ಆಗ ಅವರು ಕೋರ್ಟ್ ಮೆಟ್ಟೆಲೆರಿದರು ನ್ಯಾಯಾಲಯ ಆ ಮೀಸಲಾತಿ ಮುಂದುವರೆಸಿ ಎಂದು ಅಫಿಡೆವಿಟ್ ನೀಡಿದೆ.
ಕಿತ್ತೂರು ರಾಣಿ ಚೆನ್ನಮ್ಮಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ದಾರೆಂದು ಮೋದಿ ಭಾಷಣ ಮಾಡುತ್ತಿದ್ದಾರೆ.ಅರೆ ಸ್ವಾಮಿ ರಾಣಿ ಚೆನ್ನಮ್ಮ ಜಯಂತಿ ಪ್ರಾರಂಭ ಮಾಡಿದ್ದು ,ಬಸವಣ್ಣನವರ ನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಯಾರು ..? ನರೇಂದ್ರ ಮೋದಿಯವರೇ ಇದನ್ನು ನೀವು ಮಾಡಿದ್ರಾ ? ಎಂದು ಪ್ರಶ್ನಿಸಿದರು .ಪದೆ ಪದೆ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಸಮ ಸಮಾಜ ನಿರ್ಮಾಣಕ್ಕಾಗಿ ಡಾ.ಅಂಬೇಡ್ಕರ್ ಹೇಳಿದ್ದನ್ನು ಮಾಡಿದ್ದಿರಾ. ಮೀಸಲಾತಿ, ಸಂವಿಧಾನ ವನ್ನು ವಿರೋಧ ಮಾಡಿದವರು ಬಿಜೆಪಿ ಯವರು.ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ,ದಲಿತರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೇಸ್ ಪಕ್ಷದವರು.ಅದನ್ನು ವಿರೋಧಿಸಿದವರು ಬಿಜೆಪಿಯ ಎಮ್.ಎಲ್.ಸಿ ರಾಮಾ ಜೋಯಿಷಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ ಪ್ರಶ್ನಿಸಿದರು ಅದೃಷ್ಟವಶಾತ್ ಆ ಅರ್ಜಿ ತಿರಸ್ಕಾರವಾಯಿತು.
ಕಲಂ ೧೫,೧೬ ರಲ್ಲಿ ಮೀಸಲಾತಿ ಬಗ್ಗೆ ಸಂವಿಧಾನ ಹೇಳುತ್ತೆ .ನರೇಂದ್ರ ಮೋದಿಯವರಿಗೆ ಸಂವಿಧಾನ ಗೊತ್ತಿಲ್ಲ. ಇಂದಿರಾ ಕ್ಯಾಂಟಿನ್, ಮೈತ್ರಿ, ಶಮನಸ್ವಿನಿ, ಕೃಷಿ ಭಾಗ್ಯ, ಸಾಲ ಮನ್ನಾ ಮಾಡಿದ್ದೆವೆ.ಬಿಜೆಪಿ ಯವರು ಕೊಟ್ಟ ೬೦೦ ಭರವಸೆ ಗಳಲ್ಲಿ ೬೦ ಕೂಡ ಈಡೆರಿಸಲ್ಲ, ೧೬೫ ರಲ್ಲಿ ೧೪೮ ಭರವಸೆ ಈಡೆರಿಸದ್ದೆವೆ ಮತ್ತು ಕೇವಲ ಎಂಟು ತಿಂಗಳಲ್ಲಿ ಐದು ಗ್ಯಾರಂಟಿ ಗಳನ್ನು ಈಡೇರಿಕೆ ಮಾಡಿದ್ದೆವೆ.ಉಚಿತ ಬಸ್ ಪಾಸ್ ಫಲಾನುಭವಿ ಮಹಿಳೆ ಟಿಕೇಟ್ ನಿಂದ ಮಾಲೆ ಮಾಡಿ ನನ್ನನ್ನು ಗೌರವಿಸಿದರು ಮತ್ತು ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿ ತಂದೆ ತಿರಿಹೋದ ಮೇಲೆ ಗೃಹ ಲಕ್ಷ್ಮೀ ಹಣ ಎರಡು ಸಾವಿರ ರೂ ನಮಗೆ ಉಪಯೋಗ ವಾಗಿದೆ ಎಂದು ಹೇಳುತ್ತಾನೆ ಇದು ನಮ್ಮ ಗ್ಯಾರಂಟಿಗಳ ಸಾಧನೆ
ಸಚಿವರುಗಳಾದ ಶಿವರಾಜ ತಂಗಡಗಿ, ಬೈರತಿ ಸುರೇಶ, ಎನ್.ಎಸ್ ಬೊಸರಾಜ, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ರಾಘವೇಂದ್ರ ಹಿಟ್ನಾಳ, ಬಸನಗೌಡ ತುರವಿಹಾಳ, ಬಿ.ಎಮ್ ನಾಗರಾಜ, ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶರಣೆಗೌಡ ಬಯ್ಯಾಪುರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಸಂಗಣ್ಣ ಕರಡಿ, ಬಸವರಾಜ ಪಾಟೀಲ್ ಇಟಗಿ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.