ತರಬೇತಿ ಕಾರ್ಯಾಗಾರ
ಬಾಗಲಕೋಟೆ: ಏ.29 : ಬಾಗಲಕೋಟೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೇಮಕಗೊಂಡ ಮೈಕ್ರೋ ಆಬ್ಸರ್ವಗಳಿಗೆ ಜಿಲ್ಲಾ ಆಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ತರಬೇತಿ ಕಾರ್ಯಾಗಾರ ಜರುಗಿಸಲಾಯಿತು.
ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಸಾಮಾನ್ಯ ವೀಕ್ಷಕರಾದ ಸರವಣವೆಲ್ರಾಜ್ ಅವರು ಮತದಾನ ಪ್ರಾರಂಭದ ಮುಂಚೆಯೇ ನಿಯೋಜಿತ ಮತಗಟ್ಟೆಯಲ್ಲಿ ಹಾಜರಿದ್ದು, ಅಣಕು ಮತದಾನದ ಪ್ರಕ್ರಿಯೆಯನ್ನು ನಿಗಾವಹಿಸಬೇಕು. ವಿದ್ಯುನ್ಮಾನ ತಿಳಿದುಕೊಂಡಿರಬೇಕು. ಮೈಕ್ರೋ ಆಬ್ಸರ್ವರ್ ಅತ್ಯಂತ ಜವಾಬ್ದಾರಿಯುತವಾಗಿದ್ದು, ಅದನ್ನು ಅರಿವು ಕಾರ್ಯನಿರ್ವಹಿಸಬೇಕು ಎಂದರು.
ಮತದಾನ ಆರಂಭದಿಂದ ಮತದಾನ ಮುಕ್ತಾಯ ಆಗುವವರೆಗೆ ಹಾಜರಿದ್ದು, ಪ್ರತಿ ಹಂತದ ಮತದಾನದ ಪ್ರಕ್ರಿಯೆಯ ಮೇಲೆ ನಿಗಾವಹಿಸಿ ಪ್ರತಿಹಂತದ ವಿವರಗಳನ್ನು ದಾಖಲಿಸಬೇಕು. ಮುಕ್ತ, ನ್ಯಾಯಸಮ್ಮತ ಸುಸೂತ್ರ ಚುನಾವಣೆಗಾಗಿ ಕಾರ್ಯನಿರ್ವಹಿಸಿ, ಚುನಾವಣಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾವುದೇ ಸಮಸ್ಯೆಗಳು ಎದುರಾದರೂ ತಮ್ಮನ್ನು ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ,ಎಂ ಅವರು ಮೈಕ್ರೋ ಆಬ್ಸರವರಗಳು ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಅದಕ್ಕಾಗಿ ತರಬೇತಿ ನೀಡಲಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತರಬೇತಿದಾರರಾದ ಎನ್.ವಿ.ಶಿರಗಾನಕರ ಮತದಾನ ದಿನದಂದು ಮತಗಟ್ಟೆಗಳಲ್ಲಿ ಅನುಸರಿಸಬೇಕಾದ ಪಾತ್ರ ಮಹತ್ವವಾಗಿದ್ದು, ಸಾಮಾನ್ಯ ವೀಕ್ಷಕರಿಗೆ ಕಿವಿ, ಕಣ್ಣುಗಳಾಗಿ ಕೆಲಸ ಮಾಡಬೇಕಿದೆ. ಮತಗಟ್ಟೆಗಳಲ್ಲಿ ಯಾರು ಬರಬೇಕು. ಯಾರು ಬರಬಾರದು ಎಂಬುದರ ಬಗ್ಗೆ ವಿವರವಾಗಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ವಾಹನಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಹನ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವೀಕ್ಷಕರಾದ ಎಂ.ಆರ್ಶಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಯುಕೆಪಿ ಮಹಾ ವ್ಯವಸ್ಥಾಪಕ ಹಾಗೂ ತರಬೇತಿ ನೋಡಲ್ ಅಧಿಕಾರಿ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.