ಕಾಂಗ್ರೆಸ್ಸಿಗೆ ಮತ ಹಾಕಿದರೆ ವ್ಯರ್ಥ ವಿ.ಸೋಮಣ್ಣ
ರಾಯಚೂರು.ಏ.೨೯- ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಾಜ ಅಮರೇಶ್ವರ ನಾಯಕರ ಪರ ಮಾನ್ವಿ ಕ್ಷೇತ್ರದ ಕಲ್ಲೂರು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿ ಸೋಮಣ್ಣ ಅವರು ಮಾತನಾಡಿ “ದೇಶದ ಅಭಿವೃದ್ಧಿ ಮತ್ತು ಸುಭದ್ರತೆಗಾಗಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಂತ್ರಿ ಮಾಡಲು ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಾಜ ಅಮರೇಶ್ವರ ನಾಯಕ್ ಅವರಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷವು ೫೦ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಅಂತ ಪಕ್ಷಕ್ಕೆ ತಾವು ಮತ ನೀಡಿದರೆ ವ್ಯರ್ಥವಾಗುತ್ತದೆ ನನ್ನ ತುಮಕೂರು ಕ್ಷೇತ್ರದಲ್ಲಿ ಸಹ ಜೆಡಿಎಸ್ ಪಕ್ಷವು ಭಾರಿ ಬೆಂಬಲ ನೀಡಿದೆ ಎಂದರು ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಾಜ ಅಮರೇಶ್ವರ ನಾಯಕ ಮಾತನಾಡಿ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಸಕ್ರಿಯವಾಗಿ ಚುನಾವಣೆಯಲ್ಲಿ ಪಾಲ್ಗೊಂಡು ನನ್ನನು ಗೆಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇದು ಶ್ಲಾಘನೀಯ ,ಕಾಂಗ್ರೆಸ್ಸಿನ ಅಭ್ಯರ್ಥಿ ಕುಮಾರನಾಯಕ ರಾಯಚೂರು ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಕಾರ್ಯದರ್ಶಿಯಾಗಿ ಇದ್ದ ಸಂದರ್ಭದಲ್ಲಿ ಯಾವ ಕೆಲಸವನ್ನು ಮಾಡಿಲ್ಲ ಈಗ ಯಾವ ನೈತಿಕತೆಯಿಂದ ಮತ ಕೇಳುತ್ತಾರೆ ಅದ ಕಾರಣ ಅವರಿಗೆ ರಾಯಚೂರಿನ ಜಿಲ್ಲೆಯ ಜನತೆ ಮತ ಹಾಕಬಾರದು ಎಂದು ಹೇಳಿದರು
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಮಾತನಾಡಿ ಅಮರೇಶ್ವರ ನಾಯಕ್ ಅವರು ಅತ್ಯುತ್ತಮ ಕೆಲಸಗಾರರು ಆಗಿದ್ದು ಅವರು ಲೋಕಸಭೆ ಸದಸ್ಯರಿದ್ದಾಗ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮಾಡಿದ್ದಾರೆ ನಾವು ಸ್ಥಳೀಯರಾದ ರಾಜ ಅಮರೇಶ್ವರ ನಾಯಕರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಕಾಂಗ್ರೆಸ್ ಪಕ್ಷದ ಅಧಿಕಾರ ಬಂದಾಗಲಿಂದಲೂ ಇದುವರೆಗೂ ಶಾಸಕರು ಕ್ಷೇತ್ರದಲ್ಲಿ ಒಂದು ಕಾಮಗಾರಿಯನ್ನು ಪ್ರಾರಂಭ ಮಾಡಿಲ್ಲ ಮತ್ತು ಅನುದಾನವನ್ನು ಬಿಡುಗಡೆ ಮಾಡಿಸಿಲ್ಲ ಸರ್ಕಾರವು ದಿವಾಳಿಯಾಗಿದೆ ಎಂದರು.
ಮಾಜಿ ಶಾಸಕರಾದ ಗಂಗಾಧರ ಮಾತನಾಡಿ “ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯಿಂದ ರಾಯಚೂರಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹೊಂದಾಣಿಕೆಯಿಂದ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಾಜ ಅಮರೇಶ್ವರ ನಾಯಕ್ ಅವರು ಗೆಲ್ಲುವು ಖಚಿತ ಮೋದಿಯವರು ಪ್ರಧಾನಿ ಮಂತ್ರಿ ಆಗುವದು ಶತಸಿದ್ಧ ಎಂದು ಹೇಳಿದರು ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶರಣಪ್ಪ ಗೌಡ ಜಾಡಲದಿನ್ನಿ ,ಜೆಡಿಎಸ್ ಮಾನ್ವಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಲ್ಲಟಗಿ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಎನ್ ಶಿವಶಂಕರ ವಕೀಲರು ಹಿಂದುಳಿದ ಅಧ್ಯಕ್ಷ ಜಂಬುನಾಥ ಯಾದವ್ ಬಿಜೆಪಿ ಪಕ್ಷದ ಅಧ್ಯಕ್ಷರಾದ ದೇವರಾಜ್, ಅಮರೇಶ್ವರ ಪಾಟೀಲ್,ಬಿಜೆಪಿ ಮತ್ತು ಜೆಡಿಎಸ್ ಮುಖಂಡರು,ಕಾರ್ಯಕರ್ತರ ಇದ್ದರು.