ಮೋದಿ ಪರವಾರದಲ್ಲಿ ರೈತರು ಇಲ್ಲ – ಪ್ರಕಾಶ್ ರಾಜ್
ರಾಯಚೂರು,ಏ.೨೯- ಮಹಾಪ್ರಭು ನರೇಂದ್ರ ಮೋದಿ ಅವರ ಕಳೆದ ೧೦ ವರ್ಷ ಅವಧಿಯಲ್ಲಿ ರೈತರ ಮೇಲೆ ಹಲ್ಲೆ ಮಾಡುವುದರ ಮೂಲಕ ಮಹಿಳೆಯರ ಮಾಂಗಲ್ಯ ಸೂತ್ರಗಳನ್ನು ಕಸಿದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಅವರು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಿನ್ನೆ ನಗರದ ಕರ್ನಾಟಕ ವೇಲ್ಲೆರ್ ಶಾಲೆಯ ಸಭಾಂಗಣದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಹಮ್ಮಿ ಕೊಂಡಿದ್ದ ರಾಜಕೀಯ ಜಾಗೃತಿ ಕಾರ್ಯಕ್ರಮವನ್ನು ಮೇಣಸಿನ ಕಾಯಿಯನ್ನು ಕೆಳಗಡೆ ಹಾಕುವುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಮೋದಿ ಪರಿವಾರದಲ್ಲಿ ರೈತರು ಇಲ್ಲ ಎಂದು ಗಂಭೀರವಾಗಿ ಆರೋಪಿಸಿದರು. ರೈತ ಸಮಸ್ಯೆ ಸಮಾಜದ ಸಮಸ್ಯೆ ಅಳುವ ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾಲ ಕಾಲಕ್ಕೆ ಕೃಷಿ ಚಟುವಟಿಕೆ ಬದಲಾವಣೆ ತರುವ ಮೂಲಕ ರೈತರಿಗೆ ರಕ್ಷಣೆ ಮಾಡಬೇಕು ಎಂದರು.
ನಾವು ದೇಶವನ್ನು ಕಾಯಕ ಕಲ್ಯಾಣ ಮಾಡಲು ಹೊರಟರೆ ಬಿಜೆಪಿ ಅವರು ಕಾವಿಯಿಂದ ಕಲ್ಯಾಣ ಮಾಡುತ್ತಿದ್ದಾರೆ. ನಾನು ರೈತರ ಪರವಾಗಿ ಸರಕಾರಕ್ಕೆ ಪ್ರಶ್ನೆ ಮಾಡಿದರೆ ದೇಶದ್ರೋಹಿ ಎನ್ನುವ ಪಟ್ಟಕಟ್ಟುವರು. ನನಗೆ ರೈತರಿಗೆ ಇರುವ ಸಂಭಂಧವೆಂದರೆ ತಾಯಿ ಮಗನ ಸಂಬಂಧದಂತೆ ಕಳೆದ ೧೦ ವರ್ಷದಲ್ಲಿ ಕೇಂದ್ರ ಬಿಜೆಪಿ ಸರಕಾರವು ರೈತರ ಆತ್ಮಹತ್ಯೆ ಕುರಿತು ಯಾವುದೇ ಸಮಿತಿಯನ್ನು ರಚನೆ ಮಾಡಿಲ್ಲ. ಪ್ರದಾನಿ ಅವರು ಒಬ್ಬ ರೈತರ ಮನೆಗೆ ತೆರಳಿ ಕಷ್ಟಗಳನ್ನು ವಿಚಾರಿಸಿಲ್ಲ ಎಂದು ಆರೋಪಿಸಿದರು.ಹುಬ್ಬಳ್ಳಿಯ ನೇಹಾ ಕೊನೆಯ ಬಗ್ಗೆ ಬಿಜೆಪಿಯವರು ನ್ಯಾಯ ಕೊಡಿಸುವ ಕೆಲಸ ಮಾಡದೇ ಕೋಮುಗಲಭೆಗಳು ಆಗುವಂತೆ ಪ್ರಚೋದನೆ ಮಾಡಿದ್ದಾರೆ. ನಾನು ಕ್ಯಾಮರ ಮುಂದೆ ನಟನೆ ಮಾಡಿದ್ದೇನೆ ಪ್ರದಾನಿ ಅವರು ಜೀವನದಲ್ಲಿ ನಟನೆ ಮಾಡಿಕೊಂಡು ಕಾಲ ಕಳೆಯುತ್ತಾರೆ.
ಕಳೆದ ೧೦ ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಹಾಗಿವೆ ಎಂದು ಹೇಳುತ್ತಿದ್ದಾರೆ ಆದರೆ ಚೀನಾ ದೇಶದವರು ನಮ್ಮ ದೇಶದ ೧೦ ಲಕ್ಷ ಎಕರೆ ಭೂಮಿ ಕಬಳಿಕೆ ಮಾಡಿಕೊಂಡಿದ್ದಾರೆ.ಈ ವಿಚಾರ ಕೇಳಿದರೆ ಲಾಡಕ್ ಸುತ್ತಮುತ್ತ ೧೪೧ ನಿಷೇಧಾಜ್ಞೆ ಜಾರಿ ಮಾಡಿಸಿದ್ದಾರೆ ಮಾಡಿದ್ದಾರೆ. ಅದರಂತೆ ಇವರ ಜತೆಗೆ ಇನ್ನೋಬ್ಬ ಮೈತ್ರಿ ಮಾಡಿಕೊಂಡಿದ್ದ ಕುಮಾರಣ್ಣ ಅವರು ರಾಜ್ಯದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುತ್ತಾರೆ.ಆದರೆ ತಮ್ಮ ದಾರಿ ತಪ್ಪಿದ ಮಗನ ಬಗ್ಗೆ ಮಾತನಾಡುತ್ತಿಲ್ಲ. ಆದರಿಂದ ನಾವೆಲ್ಲರು ಮೊದ ಲು ಈ ಜನ ಪ್ರತಿನಿಧಿಗಳನ್ನು ಇಳಿಸಿ ಉತ್ತಮ ರಾಜಕೀಯ ನಾಯಕರನ್ನು ಅಧಿಕಾರಕ್ಕೆ ತಂದು ದೇಶದ ಅಭಿವೃದ್ಧಿ ಮಾಡೋಣ ಎಂದರು. ಆಯುಕ್ತ ಕಿಸಾನ್ ಮೋರ್ಚಾದ ಮುಖಂಡ ಔತಾರ ಸಿಂಗ್ ಮಾತನಾಡಿ,ಯುವಕರಿಗೆ ಕೆಲಸ ನೀಡಿ ದೇಶವನ್ನು ಅಭಿವೃದ್ಧಿ ಮಾಡದೇ, ಜಾತಿ, ಧರ್ಮದ ಆಧಾರದಲ್ಲಿ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ದೇಶದಲ್ಲಿ ಮೂಲಭೂತ ಸೌಲಭ್ಯಗಳು ದೊರೆಯದಿದ್ದರೆ ಬದುಕಬಹುದು ಆದರೆ ರೈತ ಬೆಳೆದ ಉತ್ಪನ್ನಗಳು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ,ಜಿಲ್ಲೆಯಲ್ಲಿ ಕುಡಿಯವ ನೀರಿಗಾಗಿ ರೈತರು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಆದರೆ ನೀರು ಕೊಡಿಸಲು ಇವರಿಂದ ಸಾದ್ಯವಾಗುತ್ತಿಲ್ಲ. ೨೦೧೪ ರಲ್ಲಿ ಸ್ವಾಮಿನಾಥನ ವರದಿ ಪ್ರಕಾರ ಬೆಂಬಲ ಬೆಲೆ ನೀಡಲಾಗುತ್ತದೆ ಎಂದರು. ಆದರೆ ಈಡೇರಿಸಲು ವಿಫಲರಾಗಿದ್ದಾರೆ. ರೈತರ ಸಾಲ ಮನ್ನ ಮಾಡದೇ ಕಾರ್ಪೋರೆಟ್ ಕಂಪನಿಯವರ ಸಾಲ ಮನ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಚಾಮರಸ ಮಾಲೀಪಾಟೀಲ್, ಕೆ.ಜಿ.ವೀರೇಶ, ಜಾನ್ವೆಸ್ಸಿ, ಪ್ರಭಾಕರ ಪಾಟೀಲ್, ಮಾರೇಪ್ಪ ಹರವಿ ಸೇರಿದಂತೆ ಉಪಸ್ಥಿತರಿದ್ದರು.