ಭಗವದ್ಗೀತಾ ಅಭಿಯಾನ
ಸತ್ತೂರು,ಏ.29: ಶ್ರೀ ಕೃಷ್ಣಾರ್ಜುನರ ಸಂವಾದದಲ್ಲಿ, ಶ್ರೀ ಕೃಷ್ಣ ಭೌತಿಕ ದೇಹ ಮತ್ತು ಆತ್ಮದ ನಡುವಿನ ವ್ಯತ್ಯಾಸ ತಿಳಿಸುತ್ತಾ , ಭೌತಿಕ ಶಕ್ತಿ ಮತ್ತು ಸ್ವಭಾವವಾದ ಮೂರು ಗುಣಗಳು. ಸತ್ವಗುಣ (ಒಳ್ಳೆಯತನ) ರಜಸ ಗುಣ (ಉತ್ಸಾಹ ) ಮತ್ತು ತಾಮಸಗುಣ (ಅಜ್ಞಾನ ) ಈ ಗುಣಗಳು ಪ್ರಕೃತಿಯಿಂದ ಉಂಟಾಗುತ್ತವೆ, ಪ್ರಪಂಚದಲ್ಲಿರುವ ಎಲ್ಲ ಸೂಕ್ಷ್ಮತಿ ಸೂಕ್ಷ್ಮ ಜೀವರಾಶಿಗಳಲ್ಲಿಯೂ ಇರುತ್ತವೆ ಎಂದು ಪಂ. ಸಂದೀಪಾಚಾರ ಪುರೋಹಿತರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ , ವನಸಿರಿ ನಗರದಲ್ಲಿರುವ ಕೇಶವ ಕುಲಕರ್ಣಿ ನಿವಾಸದಲ್ಲಿ ಶ್ರೀಮದ್ ಭಗವದ್ಗೀತಾ 14ನೇ ಅಧ್ಯಾಯ, ಗುಣತ್ರಯ ವಿಭಾಗ ಯೋಗ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರವಚನ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಸದಸ್ಯರಿಂದ ಪಾರಾಯಣ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಡಿಕೆ ಜೋಶಿ, ಡಾ. ಶ್ರೀನಾಥ್, ವಾಮನ್ ಭಾದ್ರಿ, ಹನುಮಂತ ಪುರಾಣಿಕ, ಉದಯ ದೇಶಪಾಂಡೆ, ಗಣೇಶ ಜೋಶಿ, ಸಂಜೀವ ಗೊಳಸಂಗಿ, ಆನಂದ ದೇಶಪಾಂಡೆ, ಸಿಕೆ ಕುಲಕರ್ಣಿ, ಆನಂದ ಭಾಗಲ, ಪ್ರಮೋದ ಸಿರುಗುಪ್ಪಿ , ಪ್ರಕಾಶ ದೇಸಾಯಿ , ಬದ್ರಿನಾಥ ಬೆಟಗೇರಿ ,ಅನಿಲ ದೇಶಪಾಂಡೆ, ಸಂಜೀವ್ ಜೋಶಿ, ಪಾಂಡುರಂಗ ಕುಲಕರ್ಣಿ, ರವೀಂದ್ರ ದೇಸಾಯಿ, ವಿಲಾಸ್ ಜೋಶಿ, ಕೃಷ್ಣ ಶಾಂತಗಿರಿ ಮುಂತಾದ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.