ರೇಷ್ಮೆ ಇಲಾಖೆಯಿಂದ ಮದುವೆ ಮಂಟಪದಲ್ಲಿ ಮತದಾನ ಜಾಗೃತಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.27;  ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಲು ಹನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದ ಮದುವೆ ಮಂಟಪದಲ್ಲಿ ನವ ದಂಪತಿಗಳಿಗೆ ಮತ್ತು ವಧು, ವರನ ಕಡೆಯವರಿಗೆ ರೇಷ್ಮೆ ಇಲಾಖೆಯಿಂದ  ಮತದಾನ ಜಾಗೃತಿ ಮೂಡಿಸಲಾಯಿತು.ಇದಕ್ಕೂ ಮೊದಲು ಕರಿಲಕ್ಕೇನಹಳ್ಳಿ ಗ್ರಾಮದ ಪ್ರಮುಖ ಬೀದಿನಗಳಲ್ಲಿ ಮತದಾನ ಜಾಗೃತಿ ಮೂಡಿಸಿ ಮದುವೆ ಮಂಟಪದಲ್ಲಿ ನೆರೆದಿದ್ದ ಜನರಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.ಈ ವೇಳೆ ರೇಷ್ಮೆ ಉಪನಿರ್ದೇಶಕರು ಪಿ.ಎಲ್.ಚಂದ್ರಪ್ಪ, ಸಹಾಯಕ ನಿರ್ದೇಶಕ ರೇಷ್ಮೆ ಎಸ್.ಎ.ಶೀಹರ್ಷ, ಪಿಡಿಓ ನಾಗರಾಜ್, ಆರ್.ಎಫ್.ಓ ಶರಣಪ್ಪ, ರೇಷ್ಮೆ ಬೆಳೆಗಾರರ ನಾಗರಾಜಪ್ಪ, ಶಿವಣ್ಣ, ಮಲ್ಲಿಕಾರ್ಜುನಪ್ಪ ಹಾಗೂ ಕರೆಲಕ್ಕೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.