ತಿಗಡೊಳ್ಳಿಯಲ್ಲಿ ವೇದಿ ಪ್ರತಿಷ್ಠಾಪನಾ ಮಹಾಮಹೋತ್ಸವ
ಚನ್ನಮ್ಮನ ಕಿತ್ತೂರ,ಏ 29: ತಾಲೂಕಿನ ತಿಗಡೊಳ್ಳಿ ಗ್ರಾಮದ ರತ್ನಾತ್ರಯ ದಿಗಂಬರ ಜನ ಮಂದಿರದಲ್ಲಿ ವೇದಿ ಪ್ರತಿಷ್ಠಾಪನಾ ಮಹಾಮಹೋತ್ಸವ ಮತ್ತು ಯಾಗ ಮಂಡಲ ವಿಧಾನ ಕಾರ್ಯಕ್ರಮವು ಅದ್ದೂರಿಯಿಂದ ನೇರವೇರಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ 108 ಆರ್ಜೀವ ಸಾಗರ ಶಿಷ್ಯದಿಂರಾದ 108 ಮಹಾನಸಾಗರ ಮಹಾರಾಜ ವಹಿಸಿಕೊಂಡಿದ್ದರು. ಇವರ ನೇತೃತ್ವದಲ್ಲಿ 4 ದಿನ ಈ ಕಾರ್ಯಕ್ರಮ ಜರುಗಿತು. ಸಾಯಂಕಾಲ ಮಕ್ಕಳಿಂದ ಜೈನ ಧರ್ಮದ ಕುರಿತು ವಿವಿಧ ವೇಷಭೂಷಣ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಶ್ರಾವಕ-ಶ್ರಾವಕೀಯರಿಂದ ವಿವಿಧ ಪೂಜಾ ಕಾರ್ಯಕ್ರಮ ನೇರವೇರಿದವು
ಈ ಕಾರ್ಯಕ್ರಮದಲ್ಲಿ ಜೈನ ಶ್ರಾವಕ-ಶ್ರಾವಕೀಯರು, ಟ್ರಸ್ಟ್ ಕಮೀಟಿ, ಜಿಲ್ಲೆ ಹಾಗೂ ಹೊರಜಿಲ್ಲೆಯವರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.