ಒಣಗಿದ ಮರ ತೆರವಿಗೆ ಸಾರ್ವಜನಿಕರ ಒತ್ತಾಯ

ಸಂಜೆವಾಣಿ ವಾರ್ತೆ
ಜಗಳೂರು.ಏ.26-: ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆ ಯಲ್ಲಿ ಸುಮಾರು ವರ್ಷದ ಮರ ಒಂದು ಒಣಗಿ ಮಳೆಗೆ ನೆಂದು ಬೆಂಡಾಗಿ ಬಾಗಿ ನಿಂತಿದೆ ಈ ಮರದ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ಕ್ವಾಟ್ರಸ್ ಮತ್ತು ಕಚೇರಿ ಮುಂಭಾಗದಲ್ಲಿರುವ ಈ ಮರ ಅಪಾಯದ ಅಂಚಿನಲ್ಲಿದೆ ಈ ರಸ್ತೆಯಲ್ಲಿ ನಳಂದ ಪದವಿಪೂರ್ವ ಕಾಲೇಜ್. ಎನ್ಎಂಕೆ ಶಾಲಾ ಮಕ್ಕಳು.ಮಾಲತಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಗಳು ವಯೋವೃದ್ಧರು, ಸಾರ್ವಜನಿಕರು, ವಾಯುವಿಹಾರಿಗಳು ಸೇರಿದಂತೆ ವಾಹನ ಸವಾರರು ದಿನನಿತ್ಯ ಸಂಚರಿಸುತ್ತಾರೆ ಈ ರಸ್ತೆ ಮರೇನಹಳ್ಳಿ.ಜಮ್ಮಾಪುರದ ಮುಖ್ಯರಸ್ತೆಯಾಗಿದೆ.ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಅಪ್ಪಿ ತಪ್ಪಿ ಸರಿಯಾದ ಗಾಳಿ ಗುಡುಗು ಸಡಿತ ಮಳೆ ಬಂದರೆ ಈ ಹಳೇಯದ ಮರ ಬೀಳೋದು ಪಕ್ಕ ಈ ಮರ ಮನುಷ್ಯರ ಮೇಲೆ ಬಿದ್ದರೆ ಸಾವು ಗ್ಯಾರೆಂಟಿ ಅಕ್ಕ ಪಕ್ಕದ ಕ್ವಾಟ್ರಸ್ ನಿವಾಸಿಗಳು ಮತ್ತು ಸಾರ್ವಜನಿಕರು ಈ ಮರದ ಹತ್ತಿರ ಓಡಾಡುವಾಗ ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಹೋಗುವ ಪ್ರಸಂಗ ಎದುರಾಗಿದೆ.ಹೀಗಾಗಿ ಈ ಕೂಡಲೇ ಸಂಬಂಧಪಟ್ಟ ತಾಲೂಕಿನ ಅರಣ್ಯ ಅಧಿಕಾರಿಗಳಾಗಲಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಈ ಒಣ ಮರಕ್ಕೆ ಕ್ರಮ ಕೈ ಗೊಳ್ಳಬೇಕೆಂದು ಇಲ್ಲಿನ ಕ್ವಾಟ್ರಸ್ ನಿವಾಸಿಗಳು ಮತ್ತು ಸಾರ್ವಜನಿಕರು ಮತ್ತು ಸಂಜೆವಾಣಿ ದಿನಪತ್ರಿಕೆ ಯೊಂದಿಗೆ ಒತ್ತಾಯಿಸುತ್ತಿದ್ದಾರೆ ಅರಣ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.