ಲಂಬಾಣಿ‌ ಧಿರಿಸಿನಲ್ಲಿ‌ ಮಿಂಚಿದ ಗಾಯತ್ರಿ ಸಿದ್ದೇಶ್ವರ್
ಸಂಜೆವಾಣಿ ವಾರ್ತೆ
ದಾವಣಗೆರೆ. ಏ.29; ಹಿಂದೂಗಳು ಶಾಂತಿಪ್ರಿಯರು ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು‌ ಲೋಕಸಭಾ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ  ಮತಯಾಚನೆ ಮಾಡಿದ ಅವರು ೬೫ ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಾಡದಿರುವ ಕೆಲಸಗಳನ್ನು ಮೋದಿಜಿ‌ ಮಾಡಿತೋರಿಸಿದ್ದಾರೆ.ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು‌ ಮೋದೀಜಿಯವರೇ ಬರಬೇಕಾಯಿತು.ರಾಮಮಂದಿರ ನಿರ್ಮಾಣದ ಮೂಲಕ ಹಿಂದೂಗಳ ಉಳಿವಿಗೆ ಮೋದಿಜಿ‌ ಪಣ ತೊಟ್ಟಿದ್ದಾರೆ.ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಅಂತ್ಯವಾಡಿದ್ದಾರೆ.ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಆರ್ಥಿಕ‌ನೆರವು ನೀಡಿದ್ದಾರೆ.ಬೆಳೆ ವಿಮೆ,ಕೃಷಿ ಸಿಂಚಾಯಿ ಮೂಲಕ‌ ಗ್ರಾಮೀಣರಿಗೆ ನೆರವು ನೀಡಿದ್ದಾರೆ.ಮುಂದೆಯೂ ಅನೇಕ ಯೋಜನೆಗಳ ಮೂಲಕ‌ ಮೋದಿಜೀ ಅಭಿವೃದ್ಧಿಯ‌ ಕನಸು ಕಂಡಿದ್ದಾರೆ ಅವರ ಕನಸು‌ಸಾಕಾರ ಗೊಳಿಸಲು‌ ಮತ್ತೊಮ್ಮೆ ಮೋದಿ‌ಆಯ್ಕೆಯಾಗಬೇಕು‌ ಜನರೂ‌ ಕೂಡ ಕಮಲದ ಗುರುತಿಗೆ ಮತ ಹಾಕಿ ನನ್ನನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.ಇದೇ ವೇಳೆ ತೋಳಹುಣಸೆ ಗ್ರಾಮದಲ್ಲಿ ಲಂಬಾಣಿ ಯುವತಿಯರೊಂದಿಗೆ ಲಂಬಾಣಿ‌ಧಿರಿಸಿನಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ್ ನಾಯ್ಕ್, ಎಚ್ ಆನಂದಪ್ಪ,ದೇವೇಂದ್ರಪ್ಪ ಶ್ಯಾಗಲೆ,ಎನ್ ಶಿವಕುಮಾರ್ , ಜಿ ಎಸ್ , ವೀರೇಂದ್ರ ಪಾಟೀಲ್ , ಡಾಬಾ ನಾಗರಾಜ್ ,ಕುಮಾರ್ ನಾಯ್ಕ್ , ತಿಪ್ಪಾ ನಾಯಕ್  , ಜಿ ಎಸ್ ಎಸ್ ಶ್ಯಾಮ್  ಇತರರಿದ್ದರು