ನಾಳೆ ಸತ್ಸಂಗ ಕಾರ್ಯಕ್ರಮ
ಕಲಬುರಗಿ,ಏ.29: ಪೂಜ್ಯ ಸಂತ ಆಶಾರಾಮಜೀ ಬಾಪು ಅವರ ಅವತರಣ ದಿನದ ನಿಮಿತ್ತ ನಾಳೆ ( ಏ.30.ಮಂಗಳವಾರ) ನಗರದಲ್ಲಿ ಸಂಜೆ 5 ಗಂಟೆಯಿಂದ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಎಂ.ಎಸ್.ಕೆ ಮಿಲ್ ರಸ್ತೆ, ಮೋಹನ್ ಲಾಡ್ಜ್ ಎದುರಿಗೆ ಇರುವ ಸಂತ ಶ್ರೀ ಆಶಾರಾಮಜೀ ಆಶ್ರಮದಲ್ಲಿ ಪೂಜ್ಯ ಸಂತ ಆಶಾರಾಮಜೀ ಬಾಪು ಅವರ ಸಾಧಿಕಾ ಶಿಷ್ಯೆ ಸಾಧ್ವಿ ಸುಶೀಲಾ ಸಹೋದರಿ ಅವರಿಂದ ಸತ್ಸಂಗ ಕಾರ್ಯಕ್ರಮ ನಡೆಯಲಿದೆ.ಮಾಹಿತಿಗಾಗಿ 8123991950 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.