ಸಂಸದ ಶ್ರೀನಿವಾಸ್ ಪ್ರಸಾಧ್ ನಿಧನಕ್ಕೆ ಗಣ್ಯರ ಸಂತಾಪ
ದೇವನಹಳ್ಳಿ ಏ೨೯:ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಡರಾತ್ರಿ ನಿಧನರಾಗಿದ್ದಾರೆ.
ಸಂಸದ ಶ್ರೀನಿವಾಸ ಪ್ರಸಾದ್ ರವರ ನಿಧನಕ್ಕೆ ದೇವನಹಳ್ಳಿ ಶಾಸಕ ಸಚಿವ ಕೆ ಎಚ್, ಮುನಿಯಪ್ಪ, ಮಾಜಿ ಶಾಸಕರಾದ ಜಿ ಚಂದ್ರಣ್ಣ,ಪಿಳ್ಳಮುನಿಶಾಮಪ್ಪ, ನಿಸರ್ಗ ನಾರಾಯಣಸ್ವಾಮಿ,
ಮಾಜಿ ಸಂಸದ,೭ನೇ ವೇತನ ಆಯೋಗದ ಅಧ್ಯಕ್ಷ ಸಿ, ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚಾಮರಾಜನಗರ ಹಾಲಿ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ರವರು (೭೬) ತಡರಾತ್ರಿ ೧:೩೦ ಸಮಯದಲ್ಲಿ ನಿಧನರಾಗಿದ್ದಾರೆಂದು ಅವರ ಕುಟುಂಬಗಳ ಮೂಲದಿಂದ ತಿಳಿದು ಬಂದಿದೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, IಅU ಘಟಕದಲ್ಲಿ ಚಿಕಿತ್ಸೆಯನ್ನ ನೀಡಲಾಗುತ್ತಿತ್ತು, ಮಧ್ಯರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಿ. ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದ ಹಾಲಿ ಸಂಸದರಾಗಿದ್ದು, ಆರೋಗ್ಯ ಸರಿ ಇಲ್ಲದ ಕಾರಣದಿಂದ ಅವರು ಈ ಬಾರಿಯ ಲೋಕಸಭಾ ಚುನಾವಣೆಯಿಂದ ಸ್ವರ್ಥಿಸಿರಲಿಲ್ಲ, ಸಕ್ರಿಯ ರಾಜಕೀಯದಿಂದ ದೂರವಾಗಿದ್ರು, ಮೃತರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್. ಇವರುಗಳನ್ನು ಅಗಲಿದ್ದಾರೆ.
ದಲಿತ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿದ್ರು, ೭ ಪ್ರಧಾನಿಗಳನ್ನ ಕಂಡಿದ್ದ ಅವರು, ೧೪ ಚುನಾವಣೆಗಳಲ್ಲಿ ಸ್ವರ್ಥಿಸಿದರು, ೧೯೪೭ರಲ್ಲಿ ಹುಟ್ಟಿದ್ದ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ೬ ಬಾರಿ ಸಂಸದರಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ೨೦೧೩ರ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿಯೂ ಕೆಲಸ ಮಾಡಿದ್ದರು. ನಂತರ ಕಾಂಗ್ರೆಸ್ ತೊರೆದ ಅವರು ಬಿಜೆಪಿ ಪಕ್ಷಕ್ಕೆ ಸೇರಿ ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ತಟಸ್ಥ ವಾಗಿದ್ದರು, ಸಂಸದ ಶ್ರೀನಿವಾಸ ಪ್ರಸಾದ್ ರವರ ನಿಧನಕ್ಕೆ ದೇವನಹಳ್ಳಿ ಶಾಸಕ ಸಚಿವ ಕೆ ಎಚ್, ಮುನಿಯಪ್ಪ, ಮಾಜಿ ಶಾಸಕರಾದ ಜಿ ಚಂದ್ರಣ್ಣ,
ಪಿಳ್ಳಮುನಿಶಾಮಪ್ಪ, ನಿಸರ್ಗ ನಾರಾಯಣಸ್ವಾಮಿ,
ಮಾಜಿ ಸಂಸದ,೭ನೇ ವೇತನ ಆಯೋಗದ ಅಧ್ಯಕ್ಷ ಸಿ, ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.