ಕಾಸರತುಗಾಂವ: ಪ್ರತಿಭಾ ಕಾರಂಜಿ, ಕಲೋತ್ಸವ
ಭಾಲ್ಕಿ,ಸೆ.21-ತಾಲೂಕಿನ ಭಾಟಸಾಂಗವಿ ವಲಯದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಕಾಸರತುಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಲಯ ಸಂಪನ್ಮೂಲ ವ್ಯಕ್ತಿಗಳಾದ ಸಿಆರ್‍ಪಿ ಪೂರ್ಣಿಮಾ ಪಾಟೀಲ್ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತಪ್ರತಿಭೆ ಹೊರತೆಗೆಯುವದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಪ್ರತಿಯೊಬ್ಬ ಮಗುವಿನಲ್ಲಿ ಒಂದು ಕಲೆ ಇರುತ್ತದೆ ಎಂದು ಹೇಳಿದರು.
ಮುಖ್ಯಗುರುಗಳಾದ ಅರ್ಜುನ ಸೂರ್ಯವಂಶಿ ಸ್ವಾಗತಿಸಿದರು. ವಿವಿಧ ವಲಯದ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಪಾಟೀಲ್, ಕಾಶೀನಾಥ್ ಪಾಂಚಾಳ್, ವೆಂಕಟ್ ರೆಡ್ಡಿ, ಬಳಿರಾಮ ಸರ್ ಶಿವಣಿ, ವೈಜಾನಾಥ್ ಮಲ್ಲಿಗೆ, ಮೇಳಕುಂದ ವಾಡಿ, ತಮಾಗ್ಯ, ಮೇಳಕುಂದ ಶಾಲೆಯ ಮುಖ್ಯಗುರುಗಳು, ವಿವಿಧ ಶಾಲೆಯ ಶಿಕ್ಷಕರು, ತೀರ್ಪುಗಾರರು ಇದ್ದರು.