ಕಲಾವಿದ ಬಂಡಯ್ಯ ಹಿರೇಮಠಗೆ ಡಾ.ವಿಷ್ಣುವರ್ಧನ ಸೇವಾ ಪ್ರಶಸ್ತಿ
ಕಲಬುರಗಿ,ಸೆ.21-ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಮದ ಕಲಾವಿದ, ಸಾಹಿತಿ, ಧಾರವಾಹಿ ಕಲಾವಿದ, ಕೀರ್ತನ, ಪುರಾಣ-ಪ್ರವಚನ ಪ್ರವಚನಕಾರ ಹೀಗೆ ವಿವಿಧ ರಂಗಗಳಲ್ಲಿ ಗಣನೀಯವಾದ ಸೇವೆ ಸಲ್ಲಿಸುತ್ತಿರುವ ಸುಂಟನೂರಿನ ಬಂಡಯ್ಯ ಎಸ್ ಹಿರೇಮಠ ಅವರಿಗೆ 2024 ನಾಲ್ಕನೇ ಸಾಲಿನ “ಡಾ.ವಿಷ್ಣುವರ್ಧನ ಸೇವಾ” ಪ್ರಶಸ್ತಿಯನ್ನು ಡಾ.ವಿಷ್ಣು ಸೇನಾ ಸಮಿತಿ ಆಳಂದ ತಾಲೂಕು ಘಟಕ ವತಿಯಿಂದ ನೀಡಿ ಗೌರವಿಸಲಾಗಿದೆ.
ಆಳಂದ ತಾಲ್ಲೂಕಿನ ಸುಂಟನೂರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಡಾ.ವಿಷ್ಣುವರ್ಧನ ಅವರ ಜಯಂತೋತ್ಸವ ಹಾಗೂ ವಿಷ್ಣು ಉತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸ್ಮಿತಾ ಜೈನ್, ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಮಹಾಲಿಂಗಪ್ಪ ಧನೋಜಿ, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಉಡುಗಿ, ವಿಷ್ಣು ಸೇನೆಯ ಕಲಬುರಗಿ ಅಧ್ಯಕ್ಷÀ ಮಹೇಶ್ ವಿಶ್ವಕರ್ಮ, ಸಂತೋಷ್ ಶಕಾಪುರೆ, ಗ್ರಾಮದ ವಿಷ್ಣುವರ್ಧನ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಶಾಲೆಯ ಗುರುಗಳು, ಶಾಲಾಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.
ಆಳಂದ ತಾಲೂಕಿನ ಅಧ್ಯಕ್ಷ ನಾಗರಾಜ ಶೀಲವಂತ ಕಾರ್ಯಕ್ರಮ ನಿರೂಪಿಸಿದರು.