ಬಾವಿಗೆ ಬಿದ್ದ ಎತ್ತುಗಳನ್ನು ಹೊರತೆಗೆದ ಅಗ್ನಿ ಶಾಮಕ ಸಿಬ್ಬಂದಿ
ತಾಳಿಕೋಟೆ:ಸೆ.21: ತಾಲೂಕಿನ ಗೊಟಖಂಡ್ಕಿ ಗ್ರಾಮದ ರೈತ ದೇವಣ್ಣ ಕವಡಿಮಟ್ಟಿ ಇವರಿಗೆ ಸೇರಿದ ಜೋಡೆತ್ತುಗಳು ಜಗಳವಾಡುತ್ತಾ(ಇರಿದಾಡುತ್ತಾ) ಅವರ ಹೊಲದಲ್ಲಿದ್ದ ಹಾಳ ಭಾವಿಯಲ್ಲಿ ಬಿದ್ದಿದ್ದು ಅವುಗಳನ್ನು ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಹೊರ ತೆಗೆಯುವದಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರರಂದು ತನ್ನ ಜಮೀನಿನಲ್ಲಿ ಹರಗುವ ಕೆಲಸಕ್ಕೆಂದು ಎರಡು ಎತ್ತುಗಳನ್ನು ತೆಗೆದುಕೊಂಡು ಹೋಗಿದ್ದ ಜಮೀನಿನ ಮಾಲಿಕ ದೇವಣ್ಣ ಕವಡಿಮಟ್ಟಿ ಅವರು ಜಮೀನಿನ ಬಧುವಿನಲ್ಲಿ ಮೇಯಲು ಬಿಟ್ಟಾಗ ಏಕಾ ಏಕಿ ಇರಿದಾಡುತ್ತಾ ಜಮೀನಿನಲ್ಲಿದ್ದ ನೀರಿಲ್ಲದ ಹಾಳ ಭಾವಿಯೊಳಗೆ ಬಿದ್ದಿವೆ ಇದನ್ನು ಗಮನಿಸಿದ ಮಾಲಿಕ ದೇವಣ್ಣ ಸ್ನೇಹಿತರ ಮೂಲಕ ಅಗ್ನಿ ಶಾಮಕ ಠಾಣೆಗೆ ಸಂಪರ್ಕಿಸಿದಾಗ ದಾವಿಸಿದ ಸಿಬ್ಬಂದಿಗಳು ಎರಡು ತ್ತುಗಳನ್ನು ಹಗ್ಗ ಮತ್ತು ಪೈಪಿನ ಸಹಾಯದ ಮೂಲಕ ಹೊರಗಡೆ ತೆಗೆದಿದ್ದಾರೆ ಆದರೆ ಅದರಲ್ಲಿಯ ಒಂದು ಎತ್ತು ಭಾವಿಯಲ್ಲಿ ಮೃತಪಟ್ಟಿದ್ದು ಇನ್ನೊಂದು ಎತ್ತು ಸುರಕ್ಷೀತವಾಗಿದ್ದು ಪಶು ವೈಧ್ಯರಿಂದ ಚಿಕೀತ್ಸೆ ಕೊಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣೆಯ ಪ್ರಭಾರಿ ಅಧಿಕಾರಿ ಪ್ರಭು ಸಣ್ಣಕ್ಕಿ, ವಾಹನ ಚಾಲಕ ವಿರೇಶ ಹಂಡ್ರಗಲ್ಲ, ಹಣಮಂತ್ರಾಯ ಕರಕಳ್ಳಿ, ಸಂತೋಷ ಲಮಾಣೆ, ಸಿಬ್ಬಂದಿಗಳು ಭಾಗವಹಿಸಿದ್ದರು.