ಶ್ರದ್ದಾಭಕ್ತಿಯಿಂದ ನೆರವೇರಿದ ಮಹಾಕಾಳಿ ಜಾತ್ರಾ ಮಹೋತ್ಸವ
ಆನೇಕಲ್. ಏ. ೨೯- ಮರಸೂರು ಮಡಿವಾಳ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಹಾಗೂ ಸಪ್ತ ಗ್ರಾಮಗಳ ಆದಿ ದೇವತೆಯಾದ ಬಂಡಿ ಮಹಾಕಾಳಿ ಜಾತ್ರಾ ಮಹೋತ್ಸವ ಅಪಾರ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಇನ್ನು ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಬಂಡಿ ಮಹಾಕಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಮರಸೂರು ಗ್ರಾಮ ಮತ್ತು ಶೆಟ್ಟಹಳ್ಳಿ ಗ್ರಾಮ ಹಾಗೂ ಹಳೆ ಊರು
ಗ್ರಾಮದಲ್ಲಿ ಮರ ಮತ್ತು ಕಬ್ಬಿಣದಿಂದ ತಯಾರಿಸಿದ ಕುರ್ಜುಗಳನ್ನು (ರಥ) ಗ್ರಾಮಸ್ಥರೆಲ್ಲರೂ ಒಟ್ಟಾಗಿ ಎತ್ತುಗಳ ಮೂಲಕ ಹಾಗೂ ಜನರು ಕೈಯಿಂದ ಕುರ್ಜುಗಳನ್ನು ಬಂಡಿ ಮಹಾಕಾಳಿ ಸನ್ನಿದಿಗೆ ಎಳೆದು ಕೊಂಡು ಬಂದ ದೃಶ್ಯ ಕಂಡು ಬಂತು.
ಇನ್ನು ಬಿಸಿಲಿನ ಬೇಗೆಯನ್ನು ನೀಗಿಸಲು ಅರವಂಟಿಕೆ ಹಾಗೂ ಅನ್ನದಾಸೋಹವನ್ನು ಆಯೋಜಿಸ ಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಸಪ್ತ ಗ್ರಾಮಗಳ ಗ್ರಾಮಸ್ಥರು ಮತ್ತು ಭಕ್ತರು ಬಾಗವಹಿಸಿದ್ದರು.