ಥೈಲ್ಯಾಂಡ್‌ನಲ್ಲಿ ಸಾಂಸ್ಕೃತಿಕ ಉತ್ಸವ
ಕನಕಪುರ,ಏ.೨೯- ಥೈಲೆಂಡ್‌ನ ಬ್ಯಾಂಕಾಕ್‌ನಲ್ಲಿ ಇಂದು ನಡೆಯಲಿರುವ ೪೪ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್‍ಯಕ್ರಮಕ್ಕೆ ಜಾನಪದಗಾಯಕ ಎಚ್.ಸಿ. ಹೊಳಸಾಲಯ್ಯ ನಡೆಸಿಕೊಡಲಿದ್ದಾರೆ.
ಈ ಕಾರ್‍ಯಕ್ರಮದಲ್ಲಿ ಕರ್ನಾಟಕ ಜಾನಪದಗೀತೆ ಹಾಡಲು ಅವಕಾಶ ದೊರೆಕಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿರುವ ಹೊಳಸಾಳಯ್ಯನವರು ಇದುತಮ್ಮಎರಡನೇಅಂತರಾಷ್ಟ್ರೀಯಜಾನಪದಗೀತಗಾಯನಕಾರ್‍ಯಕ್ರಮವಾಗಿದೆಎಂದುತಮ್ಮಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ೨೫ ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನಕ್ರೀಡಾ ಇಲಾಖೆ, ಜಿ.ಪಂ, ಸಮಾಜಕಲ್ಯಾಣ ಇಲಾಖೆ ಹಾಗೂ ಕನ್ನಡ ಪರ ಸಂಘ ಸಂಸ್ಥೆಗಳ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳಲ್ಲಿ ಭಾಗವಹಿಸಿರುವ ಇವರು ಭಾರತೀಯದಲಿತ ಸಾಹಿತ್ಯಅಕಾಡೆಮಿಯಿಂದಡಾ. ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಇವರುದೈಲಾಂಡಿನ ಬ್ಯಾಂಕಾಕ್ ನಲ್ಲಿ ನಡೆಸಿಕೊಡಲಿರುವ ಜಾನಪದಗೀತಗಾಯನಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಇವರ ಅಪಾರ ಸ್ನೇಹಿತರು, ಬಂಧುಗಳು ಸಾಹಿತಿಗಳು ಶುಭಕೋರಿದ್ದಾರೆ.