ಉಪನಯನದಲ್ಲಿ ಮತದಾನ ಜಾಗೃತಿ ಮೂಡಿಸಿದ ಪುರೊಹಿತ
ತಾಳಿಕೋಟೆ:ಏ.29: ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವದರೊಂದಿಗೆ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಪಟ್ಟಣದ ಶ್ರೀ ಶಿವಭವಾನಿ ಮಂದಿರದ ಅರ್ಚಕ ಪುರೋಹಿತ ವೇ.ಸಂತೋಷಬಟ್ ಜೋಶಿ ಅವರು ಗಣಪತಿರಾವ್ ಚವ್ಹಾಣ ಅವರ ಮೊಮ್ಮಕ್ಕಳ ಉಪನಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಜನರಿಗೆ ಜಾಗೃತಿ ಮೂಡಿಸಿದರು.
ಪಟ್ಟಣದ ಎಪಿಎಂಸಿಯ ಸಭಾ ಭವನದಲ್ಲಿ ಗಣಪತಿರಾವ್ ಚವ್ಹಾಣ ಅವರ ಮೊಮ್ಮಕ್ಕಳ ಉಪನಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಮಂತ್ರ ಘೋಷ ವಾಕ್ಯ ಹೇಳಲು ಆಗಮಿಸಿದ್ದ ಪುರೋಹಿತ ವೇ.ಸಂತೋಷಬಟ್ ಜೋಶಿ ಅವರು ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ವಿವರಿಸುತ್ತಾ ದೇಶ ರಕ್ಷಣೆ ನಮ್ಮ ಸನಾತನ ಧರ್ಮ ರಕ್ಷಣೆಯು ಅಷ್ಟೇ ಮುಖ್ಯವಾಗಿ ಸಾವಿವಾರು ವರ್ಷಗಳಿಂದಲೂ ನಮ್ಮ ದೇಶದ ಸಂಸ್ಕøತಿ ಪರಂಪರೆಯನ್ನು ಗೌರವಿಸುತ್ತಾ ಬರಲಾಗಿದೆ ಸ್ವಾತಂತ್ರ್ಯ ಪೂರ್ವದಲ್ಲಿಯ ರಾಜರ ಆಡಳಿತ ವಿಮುಕ್ತಿಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದು ದೇಶದ ಆಡಳಿತಕ್ಕೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಭಾರತ ದೇಶದಲ್ಲಿ ಪ್ರಜೆಗಳಿಗೆ ನೀಡಲಾಗಿದೆ ಇಂತಹ ಹಕ್ಕನ್ನು ಯಾರೂ ಕಳೆದುಕೊಳ್ಳದೇ ಈ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡಿ ಉಪನಯನ ಕಾರ್ಯಕ್ರಮದ ಮಂತ್ರ ಘೋಷ ವಾಕ್ಯವನ್ನು ಮುಂದುವರೆಸಿದರು.