ಮೂರು ದಿನಗಳ ಸÀಂಸ್ಕøತ-ಸಂಸ್ಕøತಿ ಶಿಬಿರ ಯಶಸ್ವಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.29:ನಗರದ ಶ್ರೀ ಪಂಚಮುಖಿ ಪ್ರಾಣದೇವರು ಹಾಗೂ ಚಕ್ರಾಂಕಿತ ರಾಮೇಶ್ವರ ದೇವಸ್ಥಾನದಲ್ಲಿ ಏ, 24 ರಿಂದ 26 ರವರೆಗೆ 3 ದಿನಗಳವರೆಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಏ.24 ರಂದು ಸಂಸ್ಕøತ-ಸಂಸ್ಕøತಿ ಶಿಬಿರದ ಉದ್ಘಾಟನೆಯನ್ನು ನಿವೃತ್ತ ಪ್ರಾಚಾರ್ಯ ಎ.ಡಿ.ದೇಶಪಾಂಡೆ ಅವರು ನೆರವೇರಿಸಿದರು.
ಶಿಬಿರದ ಅಧ್ಯಕ್ಷತೆಯನ್ನು ಶ್ರೀಕಾಂತ ಆಶ್ರೀತ ಆಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಶಿವಪ್ರಸಾದ ಜಂಗಮಶೆಟ್ಟಿ, ಜ್ಯೋತಿಷಿ ಆರ್.ಕೆ. ಇನಾಮದಾರ, ಮಹೋಪಾಧ್ಯಾಯ ರಾಮಸಿಂಗ್ ರಜಪೂತ ವಹಿಸಿದ್ದರು. ಶಿಬಿರದಲ್ಲಿ ಅತಿಥಿಗಳು ಸಂಸ್ಕøತ ಭಾಷಾ ಸಂಭಾಷಣೆ ನಡೆಸಿಕೊಟ್ಟರು.
ಏ.25 ರಂದು 2ನೇ ದಿನದ ಶಿಬಿರದಲ್ಲಿ ಮಹೋಪಾಧ್ಯಾಯ ಅಂಬಲಿ ಅವರು ಸಂಭಾಷಣೆ ನಡೆಸಿಕೊಟ್ಟರು. ಮುಖ್ಯ ಅತಿಥಿ ಉಪನ್ಯಾಸಕರಾಗಿ ನಿವೃತ್ತ ಮುಖ್ಯ ಗುರುಗಳಾದ ಪÀ್ರಕಾಶ ಇನಾಮದಾರ, ಎಲ್.ಪಿ. ಬಿರಾದಾರ, ಗುರುರಾಜ ಆರ್. ಹುಬ್ಬಳ್ಳಿ, ದಿಲೀಪಾಚಾರ್ಯ ಕಟ್ಟಿ ಶಿಬಿರಾರ್ಥಿಗಳಿಗೆ ಸಂಸ್ಕøತ ಸಂಭಾಷಣೆ ನಡೆಸಿಕೊಟ್ಟರು.
ಏ.26 ರಂದು 3ನೇ ದಿನದ ಸಂಸ್ಕøತ-ಸಂಸ್ಕøತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುತ್ತಗಿ ಆಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಂಸ್ಕøತ ಭಾಷೆ ಅತ್ಯಂತ ಸರಳ ಮತ್ತು ಶ್ರೀಮಂತವಾಗಿದೆ ಎಂದು ನುಡಿದರು.
ವೇದಿಕೆಯಲ್ಲಿ ಉಪನ್ಯಾಸಕ ಕೆ.ಜಿ. ಮಹೇಶ ಸಂಸ್ಕøತ, ಸಾಹಿತಿ ಉಪನ್ಯಾಸಕ ರಾಮಚಂದ್ರ ದಿಕ್ಷೀತ, ಅಚ್ಯುತ ಆಚಾರ್ಯರು ಸಂಸ್ಕøತ ಭಾಷೆಯ ಇತಿಹಾಸ ಹಾಗೂ ಮಹತ್ವವನ್ನು ತಿಳಿಸಿಕೊಟ್ಟರು.
3 ದಿನಗಳ ಸಂಸ್ಕøತ-ಸಂಸ್ಕøತಿ ಶಿಬಿರವನ್ನು ಅಕ್ಷಯಾಚಾರ್ಯ ಹುಬ್ಬಳ್ಳಿ (ಗಲಗಲಿ) ಹಾಗೂ ಯಲಗೂರೇಶ ಕುಲಕರ್ಣಿ ಅವರು ಸಂಘಟಿಸಿದ್ದರು.
ಈ ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಸಂಸ್ಕøತ ಭಾಷೆಯ ಮಹತ್ವವನ್ನು ಪಡೆದುಕೊಂಡರು.
ಶಿಬಿರದಲ್ಲಿ ಜಯಶ್ರೀ ಕುಲಕರ್ಣಿ, ರಶ್ಮಿ ಪಾಟೀಲ, ಶಾರದಾ ಕುಲಕರ್ಣಿ, ಉಲ್ಲಾಸ ಪಾಟೀಲ ಹಾಗೂ ಮುದ್ದು ಮಕ್ಕಳಾದ ಶ್ರೇಯಸ್, ಸುಮಧ್ವ ಮುಂತಾದವರು ಭಾಗವಹಿಸಿದ್ದರು.