ಕ್ರಾಂತಿಕಾರಕ ಬದಲಾವಣೆಗೆ ಇಂಚಗೇರಿ ಮಠ ಮಾದರಿ: ಬಸವರಾಜ ಆಜೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಏ,29: ಭಕ್ತಿ ಹಾಗೂ ಗುರು ಪರಂಪರೆಗೆ ಹೆಸರುವಾಸಿಯಾದ ಇಂಚಗೇರಿ ಮಠವು ಕ್ರಾಂತಿಕಾರಕ ಬದಲಾವಣೆಯ ಮೂಲಕ ಭಕ್ತರ ಹೃದಯದಲ್ಲಿ ಶಾಶ್ವತವಾಗಿದೆ. ಹಿಂದಿನ ಪ್ರಧಾನಿ ಇಂದಿರಾಗಾಂಧಿ ಇಂಚಗೇರಿ ಮಠದ ದರ್ಶನ ಪಡೆದು ಪ್ರಶಂಸೆ ವ್ಯಕ್ತ ಪಡಿಸಿದ್ದರು ಎಂದು ವಿಶ್ರಾಂತ ಪ್ರಾಚಾರ್ಯ ಪೆÇ್ರ. ಬಸವರಾಜ ಅಜೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶ್ರೀ ಮುರಗೋಡ ಮಹಾದೇವರು ದತ್ತಿ ಹಾಗೂ ಎಂ.ಎಸ್. ಖೇಡ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂಚಗೇರಿ ಮಠದಲ್ಲಿ ಅಂತರ್ಜಾತೀಯ ವಿವಾಹ ಏರ್ಪಡಿಸಿ ಸಾಮರಸ್ಯ ಬಾಂಧವ್ಯವನ್ನು ಮೂಡಿಸಿದ ಕೀರ್ತಿ ಸಮರ್ಥ ಜಗದ್ಗುರು ಮಾಧವಾನಂದ ಪ್ರಭುಗಳಿಗೆ ಸಲ್ಲುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಎಸ್.ಕೆ.ವಿ.ಎಮ್.ಎಸ್ ಕಾಲೇಜಿನ ಪ್ರಾಚಾರ್ಯ ಪೆÇ್ರ ಎಮ್.ಬಿ. ಹೆಬ್ಬಿ ಮಾತನಾಡಿ, ಇಂಚಗೇರಿ ಮಠ ಜಾತ್ಯತೀತವಾಗಿದೆ. ಸರ್ವರನ್ನೂ ಗೌರವಿಸುವ ಮೂಲಕ ಸಮಾನತಗೆ ಸಾಕ್ಷಿಯಾಗಿದೆ. ಎಮ್.ಎಸ್. ಖೇಡ ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ಒದಗಿಸುವದರ ಮೂಲಕ ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ ಎಂದರು.
ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯದ ಸದ್ಗರು ಪರಂಪರೆ ಕುರಿತು ದÀತ್ತಿ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳೆನ್ನವರ ಮಾತನಾಡಿ,
ಧ್ಯಾನ ಮತ್ತು ಚಿಂತನೆಗಳಿಂದ ಪಾರಮಾರ್ಥ ಕಂಡ ಸದ್ಗರು ಮಾಧವಾನಂದ ಪ್ರಭುಗಳು ಕ್ರಾಂತಿ ಕಾರಕ ಬದಲಾವಣೆಯನ್ನು ತಂದರು. ಅಸ್ಪೃಶ್ಯತೆ, ಆನ್ಯಾಯದ ವಿರುದ್ಧ ಧ್ವನಿಯಾದ ಸದ್ಗುರುಗಳು ಅಂತರ್ಜಾತೀಯ ವಿವಾಹ ಹಾಗು ಸಹ ಪಂಕ್ತಿ ಭೋಜನಗಳನ್ನು ಆಚರಣೆಯಲ್ಲಿ ತಂದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡ ಚಿಂತಕರಾಗಿದ್ದರು ಎಂದರು.
ವಿಶೇಷಚೇತನರ ಸಮಸ್ಯೆಗಳು ಹಾಗೂ ಷರಿಹಾರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕೆ. ಸುನಂದಾ ಮಾತನಾಡಿ, ತಮ್ಮ ಇಡೀ ಬದುಕನ್ನೆ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಮುಡಿಪಾಗಿಟ್ಟ ಎಮ್.ಎಸ್. ಖೇಡ ಅವರು ಮಾದರಿಯಾಗಿದ್ದಾರೆ. ವಿಕಲಚೇತನರು ವ್ಯಥೆ ಪಡದೆ ಸವಾಲಾಗಿ ಸ್ವೀಕರಿಸಿ ಸರ್ಕಾರದ ಸೌಲಭ್ಯಗಳನ್ಣು, ಸಿಕ್ಕಿರುವಂತಹ ಅವಕಾಶ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂದರು.
ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಹತಾಬ ಕಾಗವಾಡ ತತ್ವ ಪದ ಹಾಡಿದರು.
ಹಾಸಿಂಪೀರ ವಾಲಿಕಾರ, ಟಿ.ಆರ್. ಹಾವಿನಾಳ, ಶಿವಣ್ಣ ಹದಿಮೂರ, ಎ.ಎಮ್. ಹಳ್ಳೂರ, ರಾಜೇಸಾಬ ಶಿವನಗುತ್ತಿ ವೇದಿಕೆಯಲ್ಲಿದ್ದರು.
ಪೆÇ್ರ ಸುಭಾಸಚಂದ್ರ ಕನ್ನೂರ ಸ್ವಾಗತಿಸಿದರು. ದಾನಮ್ಮ ಹೂಗಾರ ನಿರೂಪಿಸಿದರು. ಲಕ್ಷ್ಮಿ ಕಾತ್ರಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾವತಿ ಅಂಕಲಗಿ, ಕಲ್ಲಪ್ಪ ಹಣಮಾನಿ, ಸುಖದೇವಿ ಅಲಬಾಳಮಠ, ಜಿ. ಎಸ್. ಬಳ್ಳೂರ. ಲತಾ ಗುಂಡಿ, ಗಂಗಮ್ಮ ರಡ್ಡಿ, ಶೋಭಾ ಬಡಿಗೇರ, ಅರ್ಜುನ ಶಿರೂರ, ಪೆÇ್ರ ಸಿದ್ದಪ್ಪ ಸಾತಲಗಾಂವ, ಮಹಾಲಿಂಗೇಶ ಸಾತಲಗಾಂವ, ಶೋಭಾ ಹರಿಜನ, ಸಿದ್ರಾಮಪ್ಪ ಜಂಗಮಶೆಟ್ಟಿ, ಅಸ್ಲಂ ಮುಲ್ಲಾ, ಶಿವಾಜಿ ಮೋರೆ, ರಿಹಾನಮಲಿಕ ಹಳ್ಳೂರ, ಮಲ್ಲಿಕಾರ್ಜುನ ಶಿವಪೂರ. ಲಕ್ಷ್ಮಿ ಬಿರಾದಾರ.ಶ್ರೀಕಾಂತ ಮಾದರ. ಅಹಮ್ಮದ ವಾಲಿಕಾರ. ಸಿದ್ರಾಮಪ್ಪ ಜಂಗಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.