ಸುಂದರ ಜೀವನಕ್ಕೆ ಶಿಕ್ಷಣವೇ ಆಧಾರ: ಡಾ.ಅಂಗಡಿ
ತಾಳಿಕೋಟೆ:ಏ.28: ಜೀವನದಲ್ಲಿ ಮುಂದೆ ಬರಬೇಕಾದರೆ ಸಾಧನೆ ಮುಖ್ಯ ಈ ಸಾಧನೆಯ ಶಿಖರವನ್ನು ಏರಬೇಕಾದರೆ ಕಠಿಣ ಪರಿಶ್ರಮ ಮತ್ತು ಛಲ ಜೀವನದಲ್ಲಿ ಬೇಕಾಗುತ್ತದೆ ಎಂದು ಕಲಬುರ್ಗಿಯ ಶಿಕ್ಷಣ ನಿಕಾಯ ಕರ್ನಾಟಕ ಕೇಂದ್ರೀಯ ವಿಧ್ಯಾಲಯದ ಶಿಕ್ಷಣ ವಿಭಾಗದ ಅಧ್ಯಕ್ಷರು ಪ್ರಾಧ್ಯಾಪಕರಾದ ಡಾ. ಆರ್.ಜಿ ಅಂಗಡಿ ಅವರು ಹೇಳಿದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರರಂದು ನಡೆದ ದಿನ ಒಂದು ದಿನದ ರಾಜ್ಯಮಟ್ಟದ ಸಂಯೋಜಿತ ಶಿಕ್ಷಕರ ಪ್ರಶಿಕ್ಷಣ ಕಾರ್ಯಕ್ರಮ ಐಟಿಇಪಿ ಕಾರ್ಯಗಾರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ನಾಲ್ಕು ವರ್ಷದ ಪದವಿ ಕೋರ್ಸ್( ಬಿ ಎಡ್ ಕೋರ್ಸ್) ಅತ್ಯಂತ ಅವಶ್ಯವಾಗಿದ್ದು ಮಹಾವಿದ್ಯಾಲಯಗಳ ಮುಖ್ಯಸ್ಥರು ಹಾಗೂ ಪ್ರಾಚಾರ್ಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಗೆ ಎಂಬುವುದರ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದ ವೀ.ವಿ.ಸಂಘದ ಅಧ್ಯಕ್ಷರಾದ ವಿ.ಸಿ ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಘದ ಸಹ ಕಾರ್ಯದರ್ಶಿ ಕೆ.ಎಸ್ ಮುರಾಳ ಭಾಗವಹಿಸಿದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾಕ್ಟರ್ ಆರ್.ಎಂ ಬಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆÇ್ರ. ಆರ್.ಆರ್ ಜಾಲವಾದಿ ಅವರು ವಹಿಸಿದ್ದರು.
ಕಾರ್ಯಗಾರದ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರ, ಧಾರವಾಡ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಬನಹಟ್ಟಿ, ರಾಮದುರ್ಗ, ಸೇರಿದಂತೆ ಸುಮಾರು 130 ಕೂ ಮಹಾವಿದ್ಯಾಲಯದ ಪ್ರಾಚಾರ್ಯರು, ಚೇರ್ಮನ್ನರು ಹಾಗೂ ಐಕ್ಯುಎಸ್ಸಿ ಸಂಯೋಜಕರು ಭಾಗವಹಿಸಿದ್ದರು.
ಉಪನ್ಯಾಸಕರಾದ ಯು.ಎನ್. ಮಂಗೊಂಡ ನಿರೂಪಿಸಿದರು ಎಂ.ಎ. ಗಂಗನಗೌಡ ಸ್ವಾಗತಿಸಿದರು. ಸುರೇಶ್ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.