ಖಜೂರಿ ಮಣ್ಣು ಪರೀಕ್ಷೆ ರೈತರಿಗೆ ತರಬೇತಿ
ಆಳಂದ:ಏ.28: ತಾಲ್ಲೂಕಿನ ಖಜೂರಿಯ ಕೋರಣೇಶ್ವರ ಮಠದಲ್ಲಿ ಶನಿವಾರ ಮಣ್ಣು ಪರೀಕ್ಷೆ ರೈತರ ತರಬೇತಿಯನ್ನು ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಹಮ್ಮಿಕೊಳ್ಳಲಾಯಿತು. ಸಮತಾ ಲೋಕ ಶಿಕ್ಷಣ ಸಮಿತಿ ಸಂಸ್ಥೆ ಕಿಸಾನ್ ಕ್ಲಿನಿಕ್ ನ ಅಧ್ಯಕ್ಷರಾದ ರಾಮರಾವ ಚವ್ಹಾಣ ಮಾತನಾಡಿ ಮಳೆ ಬಂದಾಗ ಹರಿದು ಹೋಗುವ ನೀರನ್ನು ಜಮಿನಿನಲ್ಲಿ ಇಂಗಿಸಿದರೆ ಅಂತರ್ಜಲ ಮಟ್ಟವನ್ನು ಇಮ್ಮಡಿಯಾಗುತ್ತದೆ ಇದರಿಂದ ವಿವಿಧ ಬೆಳೆಗಳು ಬೆಳೆದು ಕೃಷಿ ಜೀವಂತವಾಗಿಡಲು ಸಾಧ್ಯ ಮನುಷ್ಯರಿಗೆ ರೋಗ ರುಜಿನುಗಳು ಬಂದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿ ಉಪಚಾರ ಪಡೆದಂತೆ ರೈತರು ಪ್ರತಿವರ್ಷ ಮಣ್ಣು ಪರೀಕ್ಷೆ ಕಡ್ಡಾಯವಾಗಿ ಮಾಡಿಸಿದಾಗ ಫಲವತ್ತತೆ ಅರಿಯಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ರೈತರು ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು. ಗುಂಡೆರಾವ ಅಲಗೂಡೆ ಮಾತನಾಡಿ ಎಸ್.ಎಲ್.ಎಸ್.ಎಸ್. ಟ್ರಸ್ಟ್ ಉದ್ದೇಶಗಳು, ಧ್ಯೇಯ ಮತ್ತು ದೃಷ್ಟಿಯ ವಿವರವಾದ ಮಾಹಿತಿಯನ್ನು ತಿಳಿಸಿದರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉಳುವರಿ ಕಾರ್ಯಸೂಚಿಯನ್ನು ಕೆಂದ್ರಿಕರಿಸುತ್ತಿದ್ದೇವೆ ಮತ್ತು ಬಹು ಬೆಳೆ, ಸಮಗ್ರ ಕೃಷಿ ಮತ್ತು ಮಿಶ್ರ ಬೇಸಾಯವನ್ನು ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಿ ಮತ್ತು ನೈಸರ್ಗಿಕದಿಂದ ಪಾರಾಗಲು ಅದು ಹೇಗೆ ಸಹಾಯ ಮಾಡುತ್ತದೆ.ವಿಪತ್ತುಗಳು ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿರವಾಗುವುದು ಹೇಗೆಎಂಬುದನ್ನು ತಿಳಿಸಿದರು.ಪ್ರಶಾಂತ ಹೆಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಮಣ್ಣು ಮತ್ತು ಬೆಳೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊರಣೆಶ್ವರ ಮಠದ ಕಮಿಟಿಯ ಅಧ್ಯಕ್ಷ ಭೀಮರಾವ ಢಗೆ, ರಾಜಶೇಖರ ವಾಲೆ, ಕಿರಣ, ಪ್ರಗತಿಪರ ರೈತರಾದ ರಾಜಶೇಖರ ಹರಿಹರ, ರಾಜಶೇಖರ ವಾಲಿ ಸ್ವಾಗತಿಸಿದರು. ಸಂತೋಷ ಮಾದಗುಂಡೆ ನಿರೂಪಿಸಿದರು. .ಮಡಿವಾಳಯ್ಯ ಸ್ವಾಮಿ ವಂದಿಸಿದರು.