ವೃದ್ದರ ವಿಕಲಚೇತನರ ಮತದಾನ ಆರಂಭ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ.28: ಪರಿಶಿಷ್ಟ ವರ್ಗದ  ಮೀಸಲು ಲೋಕಸಭಾ ಕ್ಷೇತ್ರ ಬಳ್ಳಾರಿಯಲ್ಲಿ  ಇಂದು ಮತ್ತು ನಾಳೆ ವೃದ್ದರು ಮತ್ತು ವಿಕಲಚೇತನರಿಂದ ಮತದಾನ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ಪ್ರಕ್ರಿಯೆ ಇದೆ. ಆದರೆ  ಮತಗಟ್ಟೆಗೆ ಬಂದು ಮತದಾನ ಮಾಡಲು ಆಗದ 85 ವರ್ಷ ಮೇಲ್ಪಟ್ಟ ವೃದ್ದರು ಮತ್ತು ವಿಕಲಚೇತನರಿಗೆ ಚುನಾವಣಾ ಆಯೋಗ ಮನೆಯಲ್ಲಿಯೇ ಮತದಾನ ಮಾಡುವ ಹಕ್ಕು ಮತ್ತು ವ್ಯವಸ್ಥೆ ಕಲ್ಪಿಸಿದೆ.
ಇಂದು ಬೆಳಿಗ್ಗೆಯಿಂದ  ಚುನಾವಣಾ ಸಿಬ್ಬಂದಿ  ಮತಪತ್ರ, ಮತಪೆಟ್ಟಿಗೆ, ಇಂಕು, ಸೇರಿದಂತೆ  ಮತದಾನಕ್ಕೆ ಸಂಬಂಧಿಸಿದ ಸಾಮಾಗ್ರುಗಳನ್ನು
ಮನೆ ಮನೆಗೆ ತೆಗೆದುಕೊಂಡು ಹೋಗಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಈಗಗಾಲೇ ಇಂತಹ ಮತದಾರರಿಗೆ 12 ಡಿ. ಫರಾಂ ನೀಡಿ ಮತದಾನದ ಒಪ್ಪಿಗೆ ಪಡೆಯಲಾಗಿದೆ. ಕ್ಷೇತ್ರದಲ್ಲಿ 600 ಜನ ವೃದ್ದರು, 432 ಜನ ವಿಕಲಚೇತನರು ಮನೆಯಲ್ಲಿಯೇ ಮತ ಹಾಕಲು ಸಮ್ಮತಿ ನೀಡಿದ್ದಾರೆ.
ಈ ಪ್ರಕ್ರಿಯೆ ಬಗ್ಗೆ ಸಂಜೆವಾಣಿಗೆ  ವಿವರಣೆ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಖಲೀಲ್ ಸಾಬ್,  2419 ಜನ 85 ವರ್ಷ ಮೇಲ್ಪಟ್ಟ ಹಾಗು 1540 ಜನ‌ ವಿಕಲಚೇತನ ಮತದಾರರಿದ್ದಾರೆ. ಅವರಲ್ಲಿ ವೃದ್ದರು 69 ಮತ್ತು 9 ಜನ ವಿಕಲ ಚೇತನರು ಮನೆಯಲ್ಲಿಯೇ ಮತ ಚಲಾಯಿಸಲು ಬಯಸಿದ್ದಾರೆ. ನಾಲ್ಕು ತಂಡಗಳ ಮೂಲಕ‌ ಇಂದು ಮತ್ತು ನಾಳೆ ಮತದಾನ‌ನಡೆಯುತ್ತಿದೆಂದು ತಿಳಿಸಿದರು.
 ಬಳ್ಳಾರಿಯ ಜೈನು ಮಾರುಕಟ್ಟೆ ನಿವಾಸಿ ವಿಕಲಚೇತನ
ಭೇರುಲಾಲ್ ಜೈನ್, ಮನೆಯಲ್ಲಿಯೇ ಮತದಾನ‌ಮಾಡಿ. ಸಂಜೆವಾಣಿಯೊಂದಿಗೆ ಮಾತನಾಡಿ ಈ ಮೊದಲು ಮತಗಟ್ಟೆಗೆ ತೆರಳಿ ಮತದಾನ ಮಾಡಲು ತ್ರಾಸ್ ಆಗುತ್ತಿತ್ತು.‌ಈಗ ಚುನಾವಣಾ ಆಯೋಗ ಮನೆಯಲ್ಲಿಯೇ ನಮ್ಮಂತಹವರಿಗೆ ಮತದಾನ ಮಾಡಲು ವ್ಯವಸ್ಥೆ ಮಾಡಿರುವುದು ಖುಷಿ ತಂದಿದೆ.‌ಯುವ ಜನತೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಂದರು.
ಪಾರ್ವತಿ ನಗರದ ಮತ್ತೊಬ್ಬ ಮತದಾರ ವಿ. ದೇವೇಂದ್ರಪ್ಪ, ವೃದ್ದೆ ಕುಮದ ಅವರು ಮನೆಗೆ  ಬಂದು ಮತ ಪಡೆದಿದ್ದಕ್ಕೆ ತುಂಬಾ ಸಂತೋಷವಾಗಿದೆಂದರೆ. ಮತಗಟ್ಟೆಗೆ ತೆರಳಿ‌ ಸಾಲಲ್ಲಿ  ನಿಂತು‌ ಓಟ್ ಮಾಡುವುದು ಕಷ್ಟವಾಗುತ್ತಿತ್ತು. ಈ ಸೌಲಭ್ಯ ಕಲ್ಪಿಸಿದ್ದಕ್ಕೆ ಧನ್ಯವಾದಗಳೆಂದರು.
ವೃದ್ದೆ ಕುಮುದಾ ಅವರ ಮಗ ಈ ರೀತಿ‌ ವ್ಯವಸ್ಥೆ ಮಾಡಿ ಪ್ರಜಾಪ್ರಭುತ್ವದ ಹಕ್ಕು‌ಮತದಾನ ಎಲ್ಲರಿಗೂ ದೊರೆಯುವಂತೆ ಮಾಡಿರುವುದು ಸೂಕ್ತವಾಗಿದೆಂದರು.