ಮತದಾನ ಬಹಿಷ್ಕಾರ ಹಿನ್ನಲೆ ಶುಕ್ರವಾಡಿಯಲ್ಲಿ ಪೊಲೀಸ್ ಪಥ ಸಂಚಲನ
ಆಳಂದ :ಏ.28: ತಾಲ್ಲೂಕಿನ ಶುಕ್ರವಾಡಿ ಗ್ರಾಮಸ್ಥರು ಆಳಂದ ಪಟ್ಟಣಕ್ಕೆ ಬರಲು ಹೊನ್ನಳಿಯಿಂದ ಬರಬೇಕಾಗುತ್ತದೆ ಹೊನ್ನಳ್ಳಿಯವರು ಕೆಲವು ದಿನಗಳ ಹಿಂದೆ ಏಕಾಏಕಿ ರಸ್ತೆಯ ಮೇಲೆ ಕಟ್ಟಿಗೆ ಹಾಕಿ ರಸ್ತೆ ಬಂದ್ ಮಾಡಿದ್ದರು ಅದನ್ನು ಖಂಡಿಸಿ ಶುಕ್ರವಾಡಿ ಗ್ರಾಮಸ್ಥರು ಪ್ರತಿಭಟನೆ ಮಾಡಿ ನಾವು ದಿನಾಂಕ 7 . 5, 24 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು
ಆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಆಳಂದ ಪೊಲೀಸರು ಪಥ ಸಂಚಲನ ನಡೆಸಿದರು.