ನಮ್ಮ ನಡೆ ಮತಗಟ್ಟೆ ಕಡೆ
ಸಂಜೆವಾಣಿ ವಾರ್ತೆ
ಕಾರಟಗಿ:ಏ:28:ಭಾನುವಾರದಂದು ಕಾರಟಗಿ ಪುರಸಭೆಯ ವ್ಯಾಪ್ತಿಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಸದರಿ ಕಾರ್ಯಕ್ರಮಕ್ಕೆ ತಹಸೀಲ್ದಾರರು ಎಂ.ಕುಮಾರಸ್ವಾಮಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಾಗೂ ಪುರಸಭೆಯ ಅಧಿಕಾರಿ ನೌಕರರೊಂದಿಗೆ ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನವಲಿ ವೃತ್ತದ ಬಸ್ ನಿಲ್ದಾಣದವರೆಗೆ ಮತದಾನ ಜಾಗೃತಿ ಅಭಿಯಾನದ ಜಾಥ ಕಾರ್ಯಕ್ರಮವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಸುರೇಶ್, ಮತಗಟ್ಟೆ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ನೌಕರ ವೃಂದದವರು ಹಾಗೂ ಕೊಪ್ಪಳ ಜಿಲ್ಲೆಯ ಸ್ವೀಪ್ ಸಮಿತಿಯ ಚುನಾವಣೆ ICON ರಮ್ಯಾಕೃಷ್ಣ ಅವರು ಕೂಡ ಹಾಜರಿದ್ದರು,
