ಬಾವಗಿ ಭದ್ರೇಶ್ವರ ಜಾತ್ರೆಗೆ ಸಂಭ್ರಮದ ತೆರೆ
ಬೀದರ್: ಏ.28:ಪವಾಡ ಪುರುಷ ಭಕ್ತರ ಕಲ್ಪವೃಕ್ಷ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನರ ಮನೆಯ ಕುಲ ದೇವರಾದ
ಭದ್ರೇಶ್ವರ ಜಾತ್ರೆ ನಿಮಿತ್ತ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವೈಭವದ ರಥೋತ್ಸವ ನಡೆಯಿತು.
ಜಿಲ್ಲೆ, ರಾಜ್ಯ ಹಾಗೂ ನೆರೆ ರಾಜ್ಯಗಳ ಅಪಾರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಭಕ್ತರು ರಥದತ್ತ ಬೆಂಡು, ಬತ್ತಾಸು, ಖರ್ಜೂರ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಹರ ಹರ ಮಹಾದೇವ, ಭದ್ರೇಶ್ವರ ಮಹಾರಾಜ ಕೀ ಎನ್ನುವ ಘೋಷಣೆಗಳು ಮೊಳಗಿದವು. ಪುರವಂತರ ಕುಣಿತ ಗಮನ ಸೆಳೆಯಿತು. ಭದ್ರೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ರಥದ ಸ್ಥಳಕ್ಕೆ ಒಯ್ಯಲಾಯಿತು. ಪುಷ್ಪಾಲಂಕೃತ ರಥಕ್ಕೆ ಹಳ್ಳಿಖೇಡ(ಬಿ) ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.
, ಕಂಠಯ್ಯ ಸ್ವಾಮಿ ಗುಂಡಯ್ಯ ಸ್ವಾಮಿ ಪ್ರಮುಖರಾದ ಚನ್ನಮಲ್ಲಪ್ಪ ಹಜ್ಜರಗಿ, ಸಂಗಮೇಶ್ ಹಜ್ಜರಗಿ ರೇವಣಪ್ಪ ಭದ್ರಣ್ಣ, ಲೋಕೇಶ ಕನಶೆಟ್ಟಿ, ವೀರಶೆಟ್ಟಿ ಬಮ್ಮಣಿ, ಶಾಂತವೀರ್ ಹಜ್ಜರಗಿ ಸಂತೋಷ ಜಗದಾಳೆ, ಸಿದ್ಧಾರೂಢ ಭಾಲ್ಕೆ, ಮಂಜುನಾಥ ಮರಾಠ ರವಿಕುಮಾರ್ ಮುದ್ದ ಮೊದಲಾದವರು ಭಾಗವಹಿಸಿದ್ದರು.
ಜಾತ್ರೆಯ ಕೊನೆಯ ದಿನ ಭದ್ರೇಶ್ವರ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ತುಳಿಯುವುದು, ಪ್ರಸಾದ ವಿತರಣೆ, ಸಾಂಸ್ಕøತಿಕ ಕಾರ್ಯಕ್ರಮ, ಸಾಧಕರ ಸನ್ಮಾನ, ಸಂಗೀತ ಹಾಗೂ ಭಜನೆ ಕಾರ್ಯಕ್ರಮ ನಡೆದವು.