ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹ- ಬಿ.ರುದ್ರಗೌ‌ಡ
ಸಂಜೆವಾಣಿ ವಾರ್ತೆ
ಸಂಡೂರು: ಏ:28   ಪ್ರತಿಭೆಗೆ ಸದಾ ಒಂದಲ್ಲ ಒಂದು ರೀತಿಯ ಪುರಸ್ಕಾರ ಸಿಗುತ್ತದೆ, ಅಂತಹ ಉತ್ತಮ ಪ್ರÀತಿಭೆಗಳಾಗಿ ಹೊರ ಹೊಮ್ಮುವಂತಹ ವಿದ್ಯಾರ್ಥಿಗಳಿಗೆ ಬಿಕೆಜಿ ಸಮೂಹ ಸಂಸ್ಥೆಯ ವತಿಯಿಂದ ಪುರಸ್ಕರಿಸಲಾಗುವುದು ಎಂದು ಬಿ.ಕೆ.ಜಿ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಬಿ ರುದ್ರಗೌಡ ತಿಳಿಸಿದರು.
ಅವರು ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯ ಪಿ.ಯು.ಸಿ. ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಗಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಮಾತನಾಡಿ ಸಂಸ್ಥೆಯು ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಸದಾ ಸಹಕಾರ ನೀಡಲು ಸಿದ್ದವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು.
2023-24 ನೇ ಸಾಲಿನ ದ್ವೀತಿಯ ಪಿ ಯು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಬಿ.ಕೆ.ಜಿ ಪಿ ಯು ಕಾಲೇಜು ಆವರಣದಲ್ಲಿ ಬಿ ಕೆ ಜಿ ಪೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು
ಪ್ರಥಮ ಸ್ಥಾನಗಳಿಸಿದವರಿಗೆ 25,000 ರೂ ದ್ವೀತಿಯ ಸ್ಥಾನಗಳಿಸಿದವರಿಗೆ 15,000 ರೂ ಹಾಗೂ ತೃತೀಯ ಸ್ಥಾನಗಳಿಸಿದವರಿಗೆ 10,000 ರೂ ತಲಾ ಬಹುಮಾನವಾಗಿ ನೀಡಲಾಯಿತು, ವಿಜ್ಞಾನ ವಿಭಾಗದಿಂದ ಬಿ.ಭಾಗ್ಯಶ್ರೀ, ರಶ್ಮಿ ಬುಗುಡಿ, ಪ್ರಥಮ, ಕೆ ಶ್ರೀಲಲಿತಾ ದ್ವೀತಿಯ ಮತ್ತು ಗಗನ ತೃತೀಯ ಸ್ಥಾನಗಳಿಸಿದರೆ. ವಾಣಿಜ್ಯ ವಿಭಾಗದಿಂದ ಅರಿಹಂತ್ , ಹರ್ಷಿತಾ ಜೈನ್ ಪ್ರಥಮ, ರಿಧಿ ಜೈನ್ ದ್ವೀತಿಯ ಮತ್ತು ಸಾಯಿ ಸರಣ್ ತೃತೀಯ ಸ್ಥಾನ ನಗದು ಬಹುಮಾನ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಮೂಹ ಸಂಸ್ಥೆಯ ಪ್ರಾಚಾರ್ಯರಾದ ಕೆ.ವಿ ಮೋಹನ್ ರಾವ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಬಿಕೆಜಿ ಗ್ಲೋಬಲ್ ಸಂಸ್ಥೆಯ ಪಿ.ಯು.ಸಿ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮುಖ್ಯಸ್ಥರಾದ ಬಿ.ರುದ್ರಗೌಡ ಸನ್ಮಾನಿಸಿ ಗೌರವಿಸಿ ಬಹುಮಾನ ನೀಡಿದರು.