ನಾಳೆ ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಬಹಿರಂಗ ಸಭೆ. ಸಿಎಂ, ಡಿಸಿಎಂ ಭಾಗಿ, ಆಗಲೇ ಪೂರ್ವಪರ ಸಿದ್ಧತೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.28 :- ಬಳ್ಳಾರಿ ಲೋಕಸಭಾ  ಚುನಾವಣಾ ಕಾಂಗ್ರೇಸ್  ಅಭ್ಯರ್ಥಿ ಈ ತುಕಾರಾಂ ಪರ ಮತಯಾಚನೆ ಪ್ರಚಾರದ ಪ್ರಜಾಧ್ವನಿ 2ರ ಬಹಿರಂಗ ಸಭೆ ನಾಳೆ ಕೂಡ್ಲಿಗಿಯಲ್ಲಿ  ನಡೆಯಲಿದ್ದು ಸೋಮವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಹೆಲಿಕ್ಯಾಪ್ಟರ್ ಮೂಲಕ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ  ಕೂಡ್ಲಿಗಿಗೆ  ಆಗಮಿಸಲಿದ್ದು ಈಗಾಗಲೇ ಹೆಲಿಫ್ಯಾಡ್ ಹಾಗೂ ಬಹಿರಂಗ ಸಭೆಯ ವೇದಿಕೆ ಸಜ್ಜಾಗಿದ್ದು ಪೂರ್ವಪರ ತಯಾರಿಯನ್ನು ಇಂದು ಕೂಡ್ಲಿಗಿ ಶಾಸಕರು ಸೇರಿದಂತೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಜನಪ್ರತಿನಿದಿನಗಳು ಹಾಗೂ ಮುಖಂಡರು ವೀಕ್ಷಣೆ ಮಾಡಿ ಇಂದು ಬೆಳಿಗ್ಗೆ ಶಾಸಕ ಡಾ ಶ್ರೀನಿವಾಸ ಕಚೇರಿಯಲ್ಲಿ  ಪೂರ್ವಪರ ಸಭೆ ನಡೆಸಿದರು.
ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿರುವ ಕೂಡ್ಲಿಗಿ ಶಾಸಕರ ಜನಸಂಪರ್ಕ ಕಚೇರಿ ಮುಂದಿನ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು ಪ್ರಚಾರದ ಸಭೆಯ ವೇದಿಕೆಯನ್ನು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ನ  ಆವರಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ  ಸಮಾರಂಭ ಸುಸಜ್ಜಿತ ವೇದಿಕೆ ನಿರ್ಮಾಣ ಮಾಡಲಾಗಿದೆ  ಈ  ಎರಡು ಸ್ಥಳಗಳಲ್ಲಿ ಹಾಗೂ ಬಂದೋಗುವ ಸ್ಥಳದಲ್ಲಿ ಬಿಗಿಬಂದೋಬಸ್ತ್ ವ್ಯವಸ್ಥೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಹಾಗೂ ಕೂಡ್ಲಿಗಿ ಡಿವೈಎಸ್ ಪಿ, ಸಿಪಿಐ ಹಾಗೂ ಪಿಎಸ್ಐ ಸ್ಥಳಪರಿಶೀಲನೆ ನಡೆಸಿ ನಿನ್ನೆಯಿಂದಲೇ  ವೀಕ್ಷಣೆ ಮಾಡಿದ್ದು ಇಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್, ಶಿವಯೋಗಿ, ಬಳ್ಳಾರಿ ನಗರ ಅಧ್ಯಕ್ಷ ಅಲ್ಲಂ ಪ್ರಶಾಂತ,ಕೆಎಂಎಫ್ ಅಧ್ಯಕ್ಷ ಹಾಗೂ  ಮಾಜಿ ಶಾಸಕ  ಭೀಮನಾಯಕ, ಹೊಸಪೇಟೆ ಶಾಸಕ ಗವಿಯಪ್ಪ ಅವರು ಸಹ ಇಂದು ಕೂಡ್ಲಿಗಿ ಶಾಸಕರ ಕಚೇರಿಯಲ್ಲಿ ನಾಳೆ ನಡೆಯುವ ಕಾರ್ಯಕ್ರಮದ ಪೂರ್ವಪರ ಸಭೆ ನಡೆಸಿ ಸಮಾವೇಶದ ವೇದಿಕೆ ಹಾಗೂ ಹೆಲಿಪ್ಯಾಡ್ ಸ್ಥಳವನ್ನು ವೀಕ್ಷಣೆ ಮಾಡಿ ಸಮಾವೇಶ ಸುಸೂತ್ರವಾಗಿ ನಡೆಸಲು ಮತ್ತು  ಸಮಾರಂಭಕ್ಕೆ ಕಾರ್ಯಕರ್ತರ ಆಗಮನ ಮತ್ತು ಬಿಸಿಲಲ್ಲಿ ಜನರಿಗೆ ಕುಡಿಯುವ ನೀರು ಕಲ್ಪಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಮತ್ತು ನಾಳೆ ಪಟ್ಟಣಕ್ಕೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸೇರಿದಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಭೈರತಿ ಸುರೇಶ, ಸಂತೋಷಲಾಡ್, ಬಿ ನಾಗೇಂದ್ರ ಹಾಗೂ ಕಾರ್ಯಧ್ಯಕ್ಷ ವಸಂತಕುಮಾರ ಮತ್ತು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸೇರಿದಂತೆ  ಅಖಂಡ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿದಿದೆ.