ರಾಜಶೇಖರ್ ಹಿಟ್ನಾಳ್ ಪರ ಮತ ಯಾಚನೆ
ಸಂಜೆವಾಣಿ ವಾರ್ತೆ
ಕಾರಟಗಿ ಏ:28:2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ರ ಪರ ಮರ್ಲಾನಹಳ್ಳಿ ಹಾಗೂ ಸುತ್ತಮುತ್ತು ಹಳ್ಳಿಗಳಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡಲಾಯಿತು.  ಗ್ಯಾರೆಂಟಿ ಅನುಷ್ಠಾನಗಳ ಪ್ರಾಧಿಕಾರದ ಸದಸ್ಯ ಹಾಗೂ ಮರ್ಲಾನಹಳ್ಳಿ ಜಿ,ಪಂ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸೇವಾ ಕಾಂಕ್ಷಿಯಾದ ಸೋಮನಾಥ ದೊಡ್ಡಮನೆ ಮತ್ತು ತಾಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಗ್ಯಾರಂಟಿ ಯೋಜನೆಯ ಕಾರ್ಡ್ ವಿತರಿಸುವ ಮೂಲಕ
ಮತಯಾಚನೆ ಮಾಡಿದರು.
ದೀಪಾ ರಾಥೋಡ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಬೂತ್ ಅಧ್ಯಕ್ಷರು ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿ ಉಸ್ತುವಾರಿ ಹುಸೇನ್ ರವರ ನೇತೃತ್ವ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಕಾರ್ಯ ಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳ ಕಾರ್ಡನ್ನು ವಿತರಿಸುವ ಮೂಲಕ ಮತಯಾಚನೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ಮರ್ಲಾನಹಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯರಾದ ಸಿಎಚ್ ರಾಮಕೃಷ್ಣ, ವಿರೂಪಣ್ಣ ದೊಡ್ಡಮನೆ, ಮಾಬು ಸಾಬ್, ಗ್ರಾಮ ಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್ ರಾವ್, ಸದಸ್ಯ ಪ್ರಭು, ಹಾಗೂ ಒಂದನೇ ವಾರ್ಡಿನ ಬೂತ್ ಅಧ್ಯಕ್ಷ ನಜೀರ್, ಮೂರನೇ ವಾರ್ಡಿನ ಬೂತ್ ಅಧ್ಯಕ್ಷ ಮಂಜುನಾಥ್ ಜೋಗಲದಿನ್ನಿ, ಹಾಗೂ ಬೂತ್ ನ ಸದಸ್ಯರು ಭಾಗವಹಿಸಿದ್ದರು,
 ಈ ಸಂದರ್ಭದಲ್ಲಿ ವಾರ್ಡಿನ ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಮುಖರಾದ ಸುಧಾಕರ ರೆಡ್ಡಿ, ತೇಜು, ಲೋಕೇಶ್, ಹಾಗೂ ಮಾಜಿ ಗ್ರಾ ಪಂ ಸದಸ್ಯ ಆನಂದ್,ಸೇರಿದಂತೆ ಗ್ರಾಮದ ಹಿರಿಯರು, ಭಾಗವಹಿಸಿದ್ದರು