ಪ್ರಜ್ವಲ್ ರೇವಣ್ಣ ಅಶ್ಲೀಲ್ ವಿಡಿಯೋ:ಪ್ರಧಾನಿಗೆ ಪ್ರಿಯಾಂಕ್ ಪ್ರಶ್ನೆ
ಕಲಬುರಗಿ:ಏ.28:ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸುವುದಾಗಿ ಸಿಎಂ ಟ್ವಿಟ್ ಮಾಡಿದ ಬೆನ್ನಲ್ಲೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನ ಮಂತ್ರಿಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಟಾಂಗ್ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಖಾರವಾಗಿ ಬರೆದಿರುವ ಖರ್ಗೆ ,
ಪ್ರೀತಿಯ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ನಿಮಗೆ ಕರ್ನಾಟಕಕ್ಕೆ ಸ್ವಾಗತ.
ನೀವು ರಾಜ್ಯದಲ್ಲಿ ಇದ್ದೀರಾ, ಮಂಗಳ ಸೂತ್ರ, ಮುಸ್ಲಿಂ ಮೀಸಲಾತಿ ಹಾಗೂ ಪ್ರಣಾಳಿಕೆ ಕುರಿತಂತೆ ಸುಳ್ಳುಗಳನ್ನು ಬಿತ್ತುವ ಬದಲು, ಈ ಕೆಳಗಿನ ವಿಷಯದಲ್ಲಿ ಕನ್ನಡಿಗರಿಗೆ ಸತ್ಯಾಂಶ ಹೇಳಿ.
ನೂರಾರು ಮಹಿಳೆಯರಿಗೆ ದೌರ್ಜನ್ಯ ಎಸಗಿರುವ ಕುರಿತು ಗೊತ್ತಿದ್ದರೂ ಕೂಡಾ ಜೆಡಿಎಸ್ ಅಭ್ಯರ್ಥಿಗೆ ಹಾಸನ ಲೋಕಸಭೆಯ ಟಿಕೇಟು ನೀಡಿರುವುದು ಯಾಕೆ?
ಕರ್ನಾಟಕ ಬಿಜೆಪಿ ಹಾಗೂ ಭಾರತದ ಉಳಿದ ನಾಯಕರು ಯಾವಾಗ ಬೀದಿಗಿಳಿದು ಹೋರಾಟ ಮಾಡಿ ನೊಂದವರಿಗೆ ನ್ಯಾಯ ಕೊಡಿಸುತ್ತೀರಿ ?
ಜೆ.ಪಿ. ನಡ್ಡಾ ಯಾವಾಗ ನೊಂದವರ ಮನೆಗಳಿಗೆ ಭೇಟಿ ನೀಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.