ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕರೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.28: ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೋಲಶಾಂತೇಶ್ವರ ರಥೋತ್ಸವದ ಪ್ರಯುಕ್ತ ನಡೆದ ಕುಸ್ತಿ ಪಂದ್ಯಾವಳಿಗಳು ನಡೆದವು. ವಿಜೇತ ಕುಸ್ತಿಪಟುಗಳಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಜಿ ಬಹುಮಾನ ವಿತರಿಸಿ ಮಾತನಾಡಿ ಕೆಲವು ಕಾರಣಾಂತರಗಳಿಂದ ಕುಸ್ತಿಪಂದ್ಯಾವಳಿಗಳು ಸ್ಥಗಿತಗೊಂಡಿದ್ದವು, ಪ್ರಸಕ್ತ ವರ್ಷ ಮತ್ತೆ ಕುಸ್ತಿ ಪಂದ್ಯಾವಳಿ ನಡೆಸಿರುವುದು ಸಂತಸ ತಂದಿದೆ, ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಉತ್ತೇಜನ ನೀಡಬೇಕೆಂದು ಹೇಳಿದರು.
ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ, ಹುಬ್ಬಳ್ಳಿ, ಧಾರವಾಡ, ರಾಣೇಬೆನ್ನೂರು, ದಾವಣಗೆರೆ, ಹರಿಹರ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಕೂಡ್ಲಿಗಿ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಕುಸ್ತಿ ಪಟುಗಳು ಆಗಮಿಸಿದ್ದರು.
ಕುಸ್ತಿ ಪಂದ್ಯದಲ್ಲಿ ಮಹಾರಾಷ್ಟ್ರದ ಪೈಲ್ವಾನ್ ರವರು ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹರಪನಹಳ್ಳಿ ಯವರು ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಇನಾಯತ್ ಉಲ್ಲಾ, ಅಡ್ಡಿ ಚನ್ನವೀರಪ್ಪ, ಕೆ.ಮಹಾಂತೇಶ್, ಕುಸ್ತಿ ಪಟುಗಳು, ಗ್ರಾಮಸ್ಥರು ಹಾಗೂ ಇತರರು ಇದ್ದರು.
28ಎಚ್‍ಆರ್‍ಪಿ4: ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೊಲಶಾಂತೇಶ್ವರ ರಥೋತ್ಸವದ ನಿಮಿತ್ತ ಕುಸ್ತಿಪಂದ್ಯಾವಳಿ ನಡೆದಿದ್ದು, ವಿಜೇತರಿಗೆ ಬಹುಮಾನವನ್ನು ಶಾಂತಲಿಂಗದೇಶಿ ಸ್ವಾಮಿಜಿ ವಿತರಿಸಿದರು