ಇಂದು ಕುರುಕ್ಷೇತ್ರ ನಾಟಕ ಪ್ರದರ್ಶನ
ವಿಜಯಪುರ.ಏ೨೮: ಹೋಬಳಿಯ ಹುರುಳುಗುರ್ಕಿ ಗ್ರಾಮದಲ್ಲಿ ಏಪ್ರಿಲ್ ೨೮ರ ಭಾನುವಾರ ರಾತ್ರಿ ೯:೦೦ ಕ್ಕೆ ಶ್ರೀರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಏರ್ಪಡಿಸಲಾಗಿದೆ ಎಂದು ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಹುರಳುಗುರ್ಕಿ ಎಚ್. ಶ್ರೀನಿವಾಸ್ ತಿಳಿಸಿದರು.
ಶ್ರೀನಿವಾಸ್ ರವರು ಮಾತನಾಡುತ್ತಾ, ಮಾತಿಗೆ ಬೆಲೆ ಮನುಷ್ಯನಿಗೆ ಕಲೆ ಎನ್ನುವ ಹಾಗೆ ನಾಟಕ ಜೀವನ ಒಂದು ಕಲೆಯಾಗಿದ್ದು, ಹುರುಳುಗುರ್ಕಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಾಟಕಕ್ಕೆ ಆಗಮಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಕುರುಕ್ಷೇತ್ರ ನಾಟಕವನ್ನು ಮಾಜಿ ಸಚಿವ ಕೆ ಸುಧಾಕರ್ ರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್, ಮಾಜಿ ಶಾಸಕರುಗಳಾದ ನಿಸರ್ಗ ನಾರಾಯಣಸ್ವಾಮಿ, ಜಿ ಚಂದ್ರಣ್ಣ, ಪಿಳ್ಳ ಮುನಿಶ್ಯಾಮಪ್ಪ, ಆವತಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಶಾಂತ್ ಕುಮಾರ್ ಭಾಗವಹಿಸಲಿರುವರು.
ನಾಟಕದ ನಿರ್ದೇಶನವನ್ನು ಹುರಳುಗುರ್ಕಿ ಗ್ರಾಮದ ಸಂಗೀತ ನಿರ್ದೇಶಕರಾದ ವಿ.ಶ್ರೀನಿವಾಸರವರು ನಿರ್ದೇಶಿಸಲಿದ್ದು, ಶ್ರೀ ಕೃಷ್ಣನಾಗಿ ಎಚ್ ಎಂ ಮುನಿನಾರಾಯಣಪ್ಪ, ಧರ್ಮರಾಯನಾಗಿ ದೊಡ್ಡನಾರಾಯಣಪ್ಪ, ಭೀಮನಾಗಿ ಎನ್ ವಿಜಯ್ ಕುಮಾರ್, ಬಲರಾಮನಾಗಿ ಶರಣ್ ರಾಜ್, ದುರ್ಯೋಧನನಾಗಿ ಎ. ನಾರಾಯಣಪ್ಪ, ದುಶ್ಯಾಸನನಾಗಿ ಎಂ ಆನಂದ್ ಕುಮಾರ್, ಅಭಿಮನ್ಯುವಾಗಿ ಎಚ್.ಸಿ ಕೃಷ್ಣಮೂರ್ತಿ, ಕರ್ಣನಾಗಿ ಹನುಮಂತಪ್ಪ, ವಿದುರನಾಗಿ ಶ್ರೀ ಗೋವಿಂದರಾಜ್, ಶಕುನಿಯಾಗಿ ಬಿ.ಚನ್ನಪ್ಪ, ದ್ರೌಪದಿ ಹಾಗೂ ಸುಭದ್ರೆಯಾಗಿ ಭಾಗ್ಯಶ್ರೀ, ಕುಂತಿ ಹಾಗೂ ಗಾಂಧಾರಿ ಪಾತ್ರಗಳಲ್ಲಿ ಪವಿತ್ರ, ರುಕ್ಮಿಣಿಯಾಗಿ ಗೀತ ಮಾಧುರಿ, ಉತ್ತರೆ ಯಾಗಿ ಕವಿತಾ ನಟಿಸಲಿದ್ದು, ಶ್ರೀನಿವಾಸ್ ತಬಲವನ್ನು, ಪದ್ಮರಾಜ್ ಕ್ಯಾಸಿಯೋ ನುಡಿಸಲಿರುವರು.