ಸಂಸತ್ತಿನಲ್ಲಿ  ಬಳ್ಳಾರಿಯ ಜನರ ಧ್ವನಿಯಾಗುವ ತುಕಾರಾಂಗೆ ಮತ ನೀಡಿ: ನಾಗೇಂದ್ರ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.28: ಗ್ರಾಮೀಣ   ಕ್ಷೇತ್ರದ  ಸಿಂದವಾಳ ಗ್ರಾಮದಲ್ಲಿ ಇಂದು  ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಕಾಂಗ್ರೆಸ್  ಪಕ್ಷದ‌ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ರೊಡ್ ಶೋ ನಡೆಸಿ ಬಹಿರಂಗ ಪ್ರಚಾರ ಮಾಡುವ ಮೂಲಕ ಮತ ಯಾಚನೆ ಮಾಡಿದರು.
ನಂತರ ಮಾತನಾಡಿದ ಅವರು ಈ ಬಾರಿಯ ಲೋಕಸಭಾ  ಚುನಾವಣಾ ಅಭ್ಯರ್ಥಿ ಯನ್ನಾಗಿ ಸೋಲಿಲ್ಲದ ಸರದಾರ,ನಾಲ್ಕು ಬಾರಿ ಶಾಸಕರಾಗಿ ಹಲವಾರು ಹುದ್ದೆ ಅಲಂಕರಿಸಿರುವ ಯಾವುದೆ ಕಳಂಕವಿಲ್ಲದಂತಹ ಸಂಸತ್ತಿನಲ್ಲಿ ಬಳ್ಳಾರಿ ಜಿಲ್ಲೆ ಜನರ ಪರ  ಧ್ವನಿಯಾಗುವ ಈ.ತುಕಾರಾಂ ಅವರನ್ನ ಹೆಚ್ಚಿನ ಬಹುಮತಗಳಿಂದ ಗೆಲ್ಲಿಸಬೇಕು ನನ್ನ ಚುನಾವಣೆಯಲ್ಲಿ ಮತದಾನ ಮಾಡಿದಂತೆ ಈ ಚುನಾವಣೆಯಲ್ಲೂ ಉತ್ಸಾಹದಿಂದ  ತುಕಾರಾಂ ಅವರಿಗೆ ಮತ ಚೆಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್. ಮುಖಂಡರಾದ ವೆಂಕಟೇಶ್ ಪ್ರಸಾದ್, ಗಾದಿಲಿಂಗನಗೌಡ, ಬೀಮನಗೌಡ, ಸಂಗಾಲಿಈರಣ್ಣ. ಮೂಲೆಮನೆ ಗಾಧಿಲಿಂಗಪ್ಪ, ವೈ.ರಾಘವೇಂದ್ರ
ದೊಡ್ಡ ಗಾದಿಲಿಂಗಪ್ಪ, ಬಗರ್ ಹುಕುಂ ಕಮೀಟಿ ಅಧ್ಯಕ್ಷರಾದ ಹೆಚ್.ತಿಮ್ಮನಗೌಡ,ಅಣ್ಣಾ ನಾಗರಾಜ್. ಮುದಿಮಲ್ಲಯ್ಯ, ಗೋವರ್ಧನ ರೆಡ್ಡಿ, ಹಾಜರಿದ್ದರು