ಸಾಂಸ್ಕೃತಿಕ ಮತಗಟ್ಟೆ ಶೇ೮೬ ಮತದಾನ
ಮಾಲೂರು.ಏ೨೮:ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವತಿಯಿಂದ ಸಾಂಸ್ಕೃತಿಕ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.ಚಿಕ್ಕತಿರುಪತಿಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಬೂತ್ ೧ ರಲ್ಲಿ ೭೬೮ಕ್ಕೆ೭೩೦ ಮತ. ಬೂತ್ ೨ರಲ್ಲಿ ೭೦೮ ಕ್ಕೆ ೬೦೯ ಮತ ಚಲಾವಣೆ ಶೇ ೮೬ ರಷ್ಟು ಮತದಾನವಾಗಿದೆ.
ಶುಕ್ರವಾರ ಬೆಳಿಗ್ಗೆ ೭ ರಿಂದ ಆರಂಭವಾದ ಮತದಾನ ಯಾವುದೇ ರೀತಿಯ ಗೊಂದಲ ಇಲ್ಲದೆ ಸಂಜೆ ೬ ರವರೆಗೆ ನಡೆಯಿತು, ಚಿಕ್ಕತಿರುಪತಿ ಗ್ರಾಮದಲ್ಲಿ ಎರಡು ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು ಮತದಾರರು ಮತದಾನ ಕೇಂದ್ರಕ್ಕೆ ಬಂದು ತಮ್ಮ ತಮ್ಮ ಮತ ಚಲಾಯಿಸಿದರು.ನೂತನ ವಧು ವರರು ನೇರ ಮತದಾನ ಕೇಂದ್ರಕ್ಕೆಚಿಕ್ಕತಿರುಪತಿ ಗ್ರಾಮದ ನಿವಾಸಿಗಳಾದ ಕಾಮಕ್ಷಮ್ಮ ಮತ್ತು ಕೃಷ್ಣಪ್ಪನವರ ಪುತ್ರಿಗೆ ಶುಕ್ರವಾರ ವಿವಾಹ ನಡೆದಿದ್ದು ನೂತನ ವಧುವರರು ನೇರವಾಗಿ ಮತದಾನದ ಕೇಂದ್ರಕ್ಕೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿದರು
ಚಿಕ್ಕತಿರುಪತಿ ಗ್ರಾಮದ ಬಿ. ಎಲ್. ಓ ಗಳಾದ ಪ್ರಕಾಶ್. ಚನ್ನಕೃಷ್ಣರೆಡ್ಡಿ, ಚುನಾವಣಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.