ಹಾವು ಕಚ್ಚಿ ಒರ್ವ ಮೃತ
ಸಂಜೆವಾಣಿ ವಾರ್ತೆ
ಮಳವಳ್ಳಿ:- ತಾಳೆಹಳ್ಳ ಗ್ರಾಮದಲ್ಲಿ ವಿಷಪೂರಿತ ಹಾವು ಕಚ್ಚಿ ಒರ್ವ ಮೃತಪಟ್ಟ ಘಟನೆ ನಡೆದಿದೆ.
ಮೂಲತಃ ತಾಳೆಹಳ್ಳ ಗ್ರಾಮದ ವಾಸಿ ಚೌಡೇಗೌಡರ ಮಗನಾದ ನಾಗರಾಜು (38)ಶುಕ್ರವಾರ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾಗ ಹಾವು ಕಡಿದು ಜಮೀನಲ್ಲಿ ಬಿದ್ದಿದ್ದ ಇವರನ್ನು ತಕ್ಷಣ ಮಳವಳ್ಳಿ ಹಾಗೂ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿರುತ್ತಾರೆ.
ಹಲಗೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.