ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.28: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಖಾಸಗಿ ಕಾರ್ಯಕ್ರಮದ ನಿಮಿತ್ತ ಕೆ.ಆರ್.ಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ವೇಳೆ ಶಾಸಕ ಹೆಚ್.ಟಿ.ಮಂಜು ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದ ಬಳಿ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಹೆಚ್.ಡಿ.ದೇವೇಗೌಡರು ಆಗಮಿಸುತ್ತಿರುವ ಸುದ್ದಿ ತಿಳಿದ ಜೆಡಿಎಸ್ ಮುಖಂಡರುಗಳು ಅಭಿಮಾನಿಗಳು ಸ್ವಲ್ಪ ಸಮಯದಲ್ಲಿಯೇ ಎಂ.ಕೆ.ಬೊಮ್ಮೇಗೌಡ ವೃತ್ತದ ಬಳಿ ಜಮಾಯಿಸಿದ್ದರು. ಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಶಾಸಕ ಹೆಚ್.ಟಿ.ಮಂಜು ಜೊತೆ ಕೆಲಸ ನಿಮಿಷಗಳ ಕಾಲ ಚರ್ಚಿಸಿದರು. ಅಭಿಮಾನಿಗಳು ದೇವೇಗೌಡರಿಗೆ ಜೈಕಾರ ಹಾಕುತ್ತಾ ಕಾರನ್ನು ಸುತ್ತುವರಿದು ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಚುನಾವಣೆಯಲ್ಲಿ ಹಗಲಿರುಳು ಶಾಸಕ ಹೆಚ್.ಟಿ.ಮಂಜಣ್ಣ ನೇತೃತ್ವದಲ್ಲಿ ಕೆಲಸ ಮಾಡಿದ್ದು ಕುಮಾರಣ್ಣ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಮಾನಿಗಳು ಜೈಕಾರ ಕೂಗಿದರು ಎಲ್ಲರಿಗೂ ನಗುಮುಖದಿಂದಲೇ ನಮಸ್ಕರಿಸಿ ಗೌಡರು ಅಲ್ಲಿಂದ ತೆರಳಿದರು.
ಇದೇ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಡಾಲುರವಿ, ತಾಪಂ ಮಾಜಿ ಸದಸ್ಯ ಮೋಹನ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್, ಜೆಡಿಎಸ್ ಮುಖಂಡರಾದ ಹೆರಗನಹಳ್ಳಿಬಸವರಾಜು, ಮಂಜೇಗೌಡ, ಕೆಂಪರಾಜು, ಕೃಷ್ಣೇಗೌಡ, ತಾಲ್ಲೂಕು ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಹೆಚ್.ಜಿ.ಬಾಬು, ವಾಸು, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.