ಕಿರಾಣಿ ಅಂಗಡಿಯ ಮೇಲೆ ದಾಳಿ ಅಕ್ರಮ ಮದ್ಯ ಜಪ್ತಿ
ಚಿಂಚೋಳಿ,ಏ.28- ತಾಲೂಕಿನ ಮಿಯರಿಯಾಣ ಗ್ರಾಮದ ಹುವಿನತೋಟ ಜ್ಯೋತಿ ಗಂಡ ಜಗದೀಶ ಅವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಮದ್ಯವನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಅಬಕಾರಿ ಇಲಾಖೆಯ ತಂಡ ಯಶಸ್ವಿಯಾಗಿದೆ.
ನಿಖರ ಮಾಹಿತಿಯ ಮೇರೆಗೆ ಚಿಂಚೋಳಿ ಉಪ ವಲಯದ ಅಬಕಾರಿ ಉಪ ನಿರೀಕ್ಷಕ ಮೊಹ್ಮದ ಹುಸೇನ ನೆತೃತ್ವದ ತಂಡ ಕಿರಾಣಿ ಅಂಗಡಿಯ ಮೇಲೆ ದಾಳಿ ಮಾಡಿ 8910 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಿಕೊಂಡಿದೆ.
ಅಂಗಡಿ ನಡೆಸುವ ಜ್ಯೋತಿ ಜಗದೀಶ ಅವರ ವಿರುದ್ದ ಪ್ರಕಟಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಬಕಾರಿ ಉಪ ವಲಯದ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.