ಮಕ್ಕಳ ಲಾಲನೆ-ಪಾಲನೆ ಸರಿಯಾಗಿ ನಿರ್ವಹಿಸಿ
ಚಿಟಗುಪ್ಪ:ಏ.28:ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ -ಪಾಲನೆ ವ್ಯವಸ್ಥಿತವಾಗಿ ಮಾಡಿ ಎಂದು ತಾಳಮಡಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮೃತರಾವ ಮರಖಲೆ ಕೇರ್ ಟೆಕರ್ಸ್ ಗಳಿಗೆ ಹೇಳಿದರು.ತಾಲೂಕಿನ ತಾಳಮಡಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಿದ ಕೂಸಿನ ಮನೆಗೆ ದಿನಾಂಕ 26-4-2024 ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಪಿಡಿಓ,ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ 3 ವರ್ಷದ ಒಳಗಿನ ಮಕ್ಕಳಿಗೆ ಕೂಸಿನ ಮನೆಯಲ್ಲಿ ಉತ್ತಮವಾಗಿ ನೋಡಿಕೊಳ್ಳುವುದು ಮಕ್ಕಳ ಆರೈಕೆದಾರರ ಆದ್ಯ ಕರ್ತವ್ಯವಾಗಿದೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಚರಕ್ ಪಳ್ಳಿ,ಗ್ರಾಮ ಪಂಚಾಯತ ಕರವಸೂಲಿಗಾರರಾದ ರೇವಣಸಿದ್ದಪ್ಪ ಚಿನಕೇರಿ,ತಿಪ್ಪಣ್ಣ,ಗ್ರಾಮ ಪಂಚಾಯತ ಸಿಬ್ಬಂದಿ ವೀರಯ್ಯ ಸ್ವಾಮಿ,ಕಾಯಕ ಮಿತ್ರ ಬೀರಮ್ಮ,ಕೂಸಿನ ಮನೆಯ ಕೇರ್ ಟೇಕರ್ಸ್ ಗಳಾದ ಸುಲೋಚನ ನಾಗೇಂದ್ರ,ಸುರೇಖಾ ಸಜೀಶಕುಮಾರ,ಮಮಿತ ರಾಜಕುಮಾರ ಸೇರಿದಂತೆ ಇತರರಿದ್ದರು.