ಜಾನಪದ ಹಾಡುಗಳನ್ನು ಸಂಗ್ರಹಿಸಿ ನಾಡಿಗೆ ಹೆಸರು ತಂದುಕೊಟ್ಟ ಮಹಾನ್ ಶರಣ ಕರೀಂಖಾನ
ಕಲಬುರಗಿ,ಏ.27- ಒಬ್ಬ ಸಾಮಾನ್ಯ ಹುಡುಗ ಮುಸ್ಲಿಮ್ ಜನಾಂಗದಲ್ಲಿ ಹುಟ್ಟಿ ಬೆಳೆದನಾದರೂ ಚಿಕ್ಕ ವನಿರುವಾಗಲೇ ಹೆತ್ತವರನ್ನು ಕಳೆದುಕೊಂಡರೂ ಕೂಡ ತನ್ನ ಬದುಕಿನೂದ್ದಕ್ಕೂ ಅತ್ಯಂತ ಆದರ್ಶ ಜೀವನ ಗೈದ ಡಾ. ಎಸ್.ಕೆ.ಕರೀಂಖಾನ್ ಅವರು ಕೇವಲ ಎಂಟನೇ ತರಗತಿ ಯವರೆಗೆ ಅಭ್ಯಾಸ ಮಾಡಿ ಓದು ನಿಲ್ಲಿಸಿ ಜಾನಪದ ಆಸ ಕ್ತಿಯನ್ನು ಬೆಳೆಸಿಕೊಂಡು ಜಾನಪದ ಪರಂಪರೆ ಉಳಿಸಲು ಸಾವಿರಾರು ಕಿಲೋಮಿಟರ್ ಕಾಲನಡಿಗೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ತಿರುಗಿ ಜಾನಪದ ಹಾಡುಗಳನ್ನು ಸಂಗ್ರಹಿಸಿ ಈ ಕನ್ನಡ ನಾಡಿಗೆ ಹೆಸರು ತಂದುಕೊಟ್ಟ ಮಹಾನ್ ಶರಣ ಕರೀಂಖಾನರು ಎಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ನಾಗಾಂಬಿಕಾ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯದ ಸಹಯೋಗ ದಲ್ಲಿ ಹಮ್ಮಿಕೊಂಡ ನಾಡಿನ ಹಿರಿಯ ಜಾನಪದ ವಿದ್ವಾಂಸ ರಾದ ಡಾ.ಎಸ್.ಕೆ.ಕರೀಂಖಾ ನರ ಬದುಕು ಬರಹ ಕುರಿತು ಮಾತನಾಡುತ್ತಾ ಹೇಳಿದರು.
ಇವರು ಮುಸ್ಲಿಂ ವ್ಯಕ್ತಿಯಾಗಿದ್ದರು ಕೂಡ ಇವರೊಬ್ಬ ಶರಣ ಜೀವಿಯಾಗಿ ಕನ್ನಡ, ಸಂಸ್ಕøತ ಅಧ್ಯಾಯನ ಮಾಡಿದ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಶಕ್ತಿಯಾಗಿ ಶಿವಶರಣರಂತೆ ತ್ಯಾಗಿಯಾಗಿ ಆದರ್ಶ ಜೀವನ ನಡೆಸಿದವರು.
ಅಷ್ಟೇ ಅಲ್ಲದೆ ಡಾ.ಕರೀಂಖಾನರು ದೇಶ ಭ ಕ್ತರಾಗಿ ಸಾಕಷ್ಟು ಹೋರಾಟ ಗಳಲ್ಲಿ ಭಾಗವಹಿಸಿ ಗಾಂಧೀ ಜಿಯವರ ಆದರ್ಶಗಳನ್ನು ಪಾಲಿಸುತ್ತಾ ಬಂದವರು ಇವರು. ಜಾನಪದದಲ್ಲಿ ಅನೇಕ ಕೃತಿ ಗಳನ್ನು ಹೊರತಂದಿದ್ದು, ಇವರ ಸೇವೆ ಈ ನಾಡಿಗೆ ಅಚ್ಚ ಹ ಸಿರಾಗಿ ಉಳಿದಿದೆ ಎಂದು ಡಾ.ನೀಲಾಂಬಿಕಾ ಪೆÇೀಲಿಸ್ ಪಾಟೀಲರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮಾತನಾಡಿ, ಜಾನಪದವು ಅಳಿವಿ ನ ಅಂಚಿನಲ್ಲಿರುವ ಈ ಸಂದ ರ್ಭದಲ್ಲಿ ಮಾಲಿ ಪಾಟೀಲರು ಅದಕ್ಕೆ ಮೆರಗು ತರುತ್ತಿದ್ದಾರೆ ಅದನ್ನು ಉಳಿಸಿ ಬೆಳೆಸಲು ಅವರೊಂದಿಗೆ ಸದಾ ನಾವು ನೀವು ಕೈ ಸೇರಿಸಿ ಜಾನಪದ ಉಳಿಸೋಣ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕ ರ್ನಾಟಕ ಜಾನಪದ ಪರಿಷ ತ್ತಿನ ಅಧ್ಯಕ್ಷರಾದ ಸಿ.ಎ ಸ್.ಮಾಲಿಪಾಟೀಲರು ಮಾ ತನಾಡಿದರು.ಕಾರ್ಯಕ್ರಮದಲ್ಲಿದ್ದ ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಾದ ತಮ್ಮ ಸ ಲುವಾಗಿ ಹಮ್ಮಿಕೊಂಡಿದ್ದು ಮುಂಬರುವ ದಿನಗಳಲ್ಲಿ ಜಾ ನಪದ ಝೇಂಕಾರವನ್ನು ನಾ ವು ನೀವು ಕೂಡಿ ಮಾಡೋ ಣವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿ ದ ಸಂಸ್ಥೆಯ ಸಂಸ್ಥಾಪಕರು, ಪ್ರಾಚಾರ್ಯರಾದ ಡಾ.ಅರ ವಿಂದ ಬಿರಾದಾರ ಮಾತನಾ ಡುತ್ತಾ,ನಾವು ಸದಾ ಪಾಠ ಬೋಧನೆಯಲ್ಲಿಯೇ ತಲ್ಲಿನ ರಾಗುವ ನಾವುಗಳು ಇಂತಹ ಸುಂದರವಾದ ಜಾನಪದ ಕಾ ರ್ಯಕ್ರಮಗಳು ಹಮ್ಮಿಕೊ ಳ್ಳುವುದರಿಂದ ಸಾಂಸ್ಕೃತಿಕ ಲೋಕದ ಬಗ್ಗೆ ನಮಗೂ ಕೂ ಡ ಅರಿವಿಗೆ ಬರುತ್ತದೆ.ಈ ಕಾ ರ್ಯಕ್ರಮ ನಮ್ಮ ಕಾಲೇಜಿನ ಲ್ಲಿಟ್ಟುಕೊಂಡು ವಿದ್ಯಾರ್ಥಿನಿ ಯರಿಗೆ ಮನಮುಟ್ಟುವಂತೆ ಮಾಡಿದ ಮಾಲಿಪಾಟೀಲರಿ ಗೆ ಎಷ್ಟು ಕೃತಘ್ನತೆಗಳು ಹೇ ಳಿದರು ಕೂಡ ಕಡಿಮೆ ನಾವು ಸದಾ ಅವರೊಂದಿಗೆ ಇರು ತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಈ ಪರಿಷತ್ತಿನಿಂದ ಕಾಲೇಜಿ ನಿಂದ ಇತ್ತೀಚಗೆ ಸಾವಿತ್ರಿದೇ ವಿ ಫುಲೆ ಪ್ರಶಸ್ತಿ ಪಡೆದ ಕವಿ ತ್ರಿ ಹಾಗೂ ಶಿಕ್ಷಕಿಯಾದ ಶ್ರೀ ಮತಿ ಮಲ್ಲಮ್ಮ.ಎಸ್.ಕಾಳ ಗಿ ಇವರಿಗೆ ಸನ್ಮಾನಿಸಿ ಗೌರ ವಿಸಲಾಯಿತು.ವೇದಿಕೆಯ ಮೇಲೆ ಪರಿಷತ್ತಿನ ಪದಾಧಿ ಕಾರಿ ಶ್ರೀ ಡಿ.ಪಿ.ಸಜ್ಜನ ಇತರ ರು ಇದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾ ದ ಶ್ರೀ ಧರ್ಮಣ್ಣ ಧನ್ನಿ,ಪರಿ ಷತ್ತಿನ ಕಾಳಗಿ ತಾಲೂಕಿನ ಅಧ್ಯಕ್ಷರಾದ ಶ್ರೀ ಸಂತೋಷ ಕೊಡೋಳ್ಳಿ ಕಾಲೇಜಿನ ಆಡ ಳಿತಾಧಿಕಾರಿ ಶ್ರೀ ಅಕ್ಷಯ ಅ. ಬಿರಾದಾರ,ಶ್ರೀಮತಿ ಸಾಬೀ ಯ ಸುಲ್ತಾನಾ,ಪಾರ್ವತಿ ಉ ಪನ್ಯಾಸಕರು ಸಿಬ್ಬಂದಿಯವ ರು ವಿದ್ಯಾರ್ಥಿನಿಯರು ಇದ್ದ ರು. ಕಾರ್ಯಕ್ರಮದ ನಿರೂಪಣೆ ಕು,ವೈಷ್ಣವಿ,ಪ್ರಾರ್ಥನೆ,ಕು,ಭಾಗ್ಯಶ್ರೀ ಹಾಗೂ ವೀರಮ್ಮ, ಸ್ವಾಗತ,ಉಪನ್ಯಾಸಕರಾದ ಶ್ರೀಮತಿ ಮಹಾನಂದಾ ಮಾ ಲಿಪಾಟೀಲ,ವಂದನಾರ್ಪಣೆ,ಶ್ರೀ ಡಿ.ಪಿ.ಸಜ್ಜನ ನಡೆಸಿಕೊ ಟ್ಟರೆಂದು ಪತ್ರಿಕಾ ಪ್ರಕಟಣೆ ಗಾಗಿ ಸಜ್ಜನ ತಿಳಿಸಿದರು.