ಸುಳ್ಳು ಹೇಳೋದ್ರಲ್ಲಿ ಮೋದಿ ನಿಸ್ಸೀಮ: ಸಿದ್ದರಾಮಯ್ಯ ಟೀಕೆ
ಕಲಬುರಗಿ:ಏ.27: ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಸುಳ್ಳುಗಳನ್ನೇ ಪದೇಪದೇ ಮಾರ್ಕೆಟ್ ಮಾಡುತ್ತಾ ಬರುತ್ತಿದ್ದಾರೆ. ಸುಳ್ಳು ಹೇಳೋದ್ರಲ್ಲಿ ಅವರು ನಿಸ್ಸೀಮರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿನ ಖಾಸಗಿ ಹೋಟೆಲ್‍ವೊಂದರಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಲೋಕಸಭಾಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಶೇ.4ರಷ್ಟು ಮೀಸಲಾತಿಯನ್ನು ಆ ಸಮುದಾಯಕ್ಕೆ ನೀಡಿದೆಎಂದು ಸುಳ್ಳು ಜಾಹೀರಾತು ನೀಡಲಾಗಿದೆ.ಇದರ ವಿರುದ್ಧಕೇಂದ್ರಚುನಾವಣಾಆಯೋಗಕ್ಕೆದೂರು ಸಲ್ಲಿಸುವುದಾಗಿ ಹೇಳಿದರು.
ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರತೋರಿದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಓಡುತ್ತಿದ್ದಾರೆ.ಇದನ್ನುಜನರು ಗಮನಿಸುತ್ತಿದ್ದಾರೆ. ಹಾಗಾಗಿ, ಈಗಾಗಲೇ ರಾಜ್ಯದಲ್ಲಿ ಮುಕ್ತಾಯಗೊಂಡಿರುವ ಮೊದಲ ಹಂತದಚುನಾವಣೆಯಲ್ಲಿಜನರುಕಾಂಗ್ರೆಸ್ ಪಕ್ಷಕ್ಕೆಉತ್ತಮ ಬೆಂಬಲ ನೀಡಿರುವುದಾಗಿ ಸಮೀಕ್ಷೆಗಳು ಹೇಳುತ್ತಿವೆ ಎಂದರು.
ಸಂವಿಧಾನದಎದುರುಎಲ್ಲರೂ ಸಮಾನರು ಎಂಬ ತತ್ವದ ಮೇಲೆ ಆರ್ಟಿಕಲ್ 14, 15 ಮತ್ತು 16ರ ಅನ್ವಯ 1992ರಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಲಯದಲ್ಲಿ ಮೀಸಲಾತಿ ನೀಡಿದಾಗ ಆಗಲೂ ಬಿಜೆಪಿ ಸುಪ್ರಿಂಕೋರ್ಟ್ ಸಾಂವಿಧಾನಿಕ ಪೀಠದಎದುರುತನ್ನಆಕ್ಷೇಪ ವ್ಯಕ್ತಪಡಿಸಿತ್ತು.ಈ ಆಕ್ಷೇಪವನ್ನು ಸುಪ್ರಿಂಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿತ್ತು.ಇದಾದ ಬಳಿಕ ಮಂಡಲ್‍ಆಯೋಗ ಜಾರಿಗೊಳಿಸಿದ ನಂತರ ಪ್ರತಿರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತಆಯೋಗಇರಬೇಕೆಂದು ನಿಯಮರೂಪಿಸಲಾಯಿತು.ಮಂಡಲ್‍ಆಯೋಗರಚನೆಗೊಂಡಾಗಲೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.ಇದೆಲ್ಲವನ್ನೂ ನೋಡುತ್ತಿದ್ದರೆ ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಲ್ಲಎಂಬುದು ಸಾಬೀತಾಗುತ್ತದೆಎಂದು ವ್ಯಾಖ್ಯಾನಿಸಿದರು.
ಈ ಹಿಂದೆರಾಜೀವ್‍ಗಾಂಧಿ ಪ್ರಧಾನಿ ಆಗಿದ್ದಾಗ ಸಂವಿಧಾನದಅನುಚ್ಛೇದ 73 ಮತ್ತು 74ಕ್ಕೆ ತಿದ್ದುಪಡಿತಂದು 73ರ ಅನ್ವಯಜಿಲ್ಲಾ ಪಂಚಾಯಿತಿ ಮತ್ತುತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಕಲ್ಪಿಸಲಾಯಿತು.ಮುಂದೆ ನರಸಿಂಹರಾವ್ ಪ್ರಧಾನಿ ಆದಾಗ ಈ ಕಾನೂನು ಜಾರಿಗೆತರಲಾಯಿತು.ಇದೇವೇಳೆ, ಕರ್ನಾಟದಲ್ಲಿ ಬಿಸಿಎಂ-ಎ ಮತ್ತು ಬಿಸಿಎಂ-ಬಿ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿಕಲ್ಪಿಸಲಾಯಿತು.ಈ ಮೀಸಲಾತಿ ಅಡಿ ಮಹಿಳೆಯರೂ ಬರುವಂತೆ ನಿಯಮರೂಪಿಸಲಾಯಿತು.ಇದರಡಿ ಬಿಸಿಎಂ-ಎ ಅಡಿಯಲ್ಲಿ ಶೇ.26.4 ಮತ್ತು ಬಿಸಿಎಂ-ಬಿ ಅಡಿಯಲಿ ಶೇ.6.6ರಷ್ಟು ಮೀಸಲಾತಿ ನಿಗದಿಪಡಿಸಲಾಯಿತು.ಮುಂದೆಚಿನ್ನಪ್ಪರೆಡ್ಡಿಆಯೋಗದ ಪ್ರಕಾರ ಶಿಕ್ಷಣ ಮತ್ತುಉದ್ಯೋಗದಲ್ಲಿ ಶೇ.4ರಷ್ಟು ಮೀಸಲಾತಿ ನೀಡುವಂತೆ ಮಾಡಿದ ಶಿಫಾರಸ್ಸಿಗೆ ಅನುಗುಣವಾಗಿ 1994-95ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಆಗಿದ್ದಾಗ ಬಿಸಿಎಂ-ಎ ಅಡಿ ಮುಸ್ಲಿಮರನ್ನು ಸೇರ್ಪಡೆ ಮಾಡಿ ಶೇ.4ರಷ್ಟು ಮೀಸಲಾತಿ ನೀಡಿದರು.ಆಗಲೂ ಬಿಜೆಪಿ ಪರವಾಗಿರಾಮಾಜೋಯಿಸ್ ಸುಪ್ರಿಂಕೋರ್ಟ್‍ನಲ್ಲಿ ಮೀಸಲಾತಿ ಪ್ರಶ್ನಿಸಿದಾಗ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ 30 ವರ್ಷಗಳಿಂದಲೂ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಈ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ ಮಾಡಿದ ಬಿಜೆಪಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಆಗಿದ್ದಾಗ ಲಿಂಗಾಯತರು ಹಾಗೂ ಒಕ್ಕಲಿಗರ ಮೀಸಲಾತಿ ಹೆಚ್ಚಳದ ನೆಪವೊಡ್ಡಿ ಮುಸ್ಲಿಮರ ಶೇ.4ರಷ್ಟು ಮೀಸಲಾತಿ ಕಿತ್ತುಕೊಳ್ಳುವ ಪ್ರಯತ್ನ ಮಾಡಿ ವಿಫಲವಾಗಿದ್ದನ್ನುಜನರು ನೋಡಿದ್ದಾರೆಎಂದು ನುಡಿದರು.
ಕೇವಲ ಮತಗಳ ಧ್ರುವೀಕರಣಕ್ಕಾಗಿಪ್ರಧಾನಿ ನರೇಂದ್ರ ಮೋದಿ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುವುದು ಪ್ರಧಾನಿ ಖುರ್ಚಿಗೆ ಶೋಭೆತರುವಂಥದ್ದಲ್ಲಎಂದ ಸಿದ್ದರಾಮಯ್ಯ, ಈ ದೇಶದ 140 ಕೋಟಿಜನರ ಮಾನ-ಪ್ರಾಣರಕ್ಷಣೆಯಜವಾಬ್ದಾರಿತಮ್ಮ ಮೇಲಿದೆಎಂಬುದನ್ನು ಪ್ರಧಾನಿ ಮೋದಿ ಮರೆಯಬಾರದುಎಂದು ಕಿವಿಮಾತು ಹೇಳಿದರು.
ರೂ.3454ಕೋಟಿ ಬರ ಪರಿಹಾರಕ್ಕೆಅತೃಪ್ತಿ
ರಾಜ್ಯದಲ್ಲಿತಲೆದೋರಿದ ಬರ ಪರಿಸ್ಥಿತಿ ನಿರ್ವಹಣೆಗೆರಾಜ್ಯ ಸರಕಾರ ರೂ.18,172 ಕೋಟಿ ನೀಡುವಂತೆ ಬೇಡಿಕೆ ಸಲ್ಲಿಸಿದ್ದರೆ, ಕೇಂದ್ರ ಸರಕಾರ ಕೇವಲ ರೂ.3454 ಕೋಟಿ ಪರಿಹಾರ ಬಿಡುಗಡೆ ಮಾಡಿರುವುದುತೀವ್ರಅನ್ಯಾಯಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೂ.35 ಸಾವಿರಕೋಟಿಯಷ್ಟು ಬೆಳೆ ಹಾನಿಯಾಗಿದೆ. ಈ ಹಾನಿಯ ಪ್ರಮಾಣದನ್ವಯಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ ರೂ.18172 ಕೋಟಿ ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.ಮೇಲಾಗಿ, ಈ ನಿಟ್ಟಿನಲ್ಲಿ ಗೃಹ ಸಚಿವಅಮಿತ್‍ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನಆಗಿರಲಿಲ್ಲ. ಕೊನೆಗೆ ಸುಪ್ರಿಂಕೋರ್ಟ್ ಮಧ್ಯಸ್ಥಿಕೆಯಲ್ಲಿ ಪರಿಹಾರ ಪಡೆಯುವಂತಾಯಿತುಎಂದರು.
‘ಡಿಕೆಶಿಜೊತೆ ಶೀತಲ ಸಮರಇಲ್ಲ’
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಮಧ್ಯೆಯಾವುದೇರೀತಿಯ ಶೀತಲ ಸಮರ ನಡೆಯುತ್ತಿಲ್ಲಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಅಸ್ಸಾಂ ಮುಖ್ಯಮಂತ್ರಿಹಿಮಾಂತ ಬಿಸ್ವಾಸ್ ಶರ್ಮ ಈ ನಿಟ್ಟಿನಲ್ಲಿ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರ ಗಮನ ಸೆಳೆಯುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ (ಅಸ್ಸಾ ಸಿಎಂ) ಪ್ರಧಾನಿಯೂಅಲ್ಲ. ಬಿಜೆಪಿ ಅಧ್ಯಕ್ಷನೂಅಲ್ಲ. ಮೇಲಾಗಿ, ಕರ್ನಾಟಕದ ವಿರೋಧ ಪಕ್ಷದ ನಾಯಕನೂಅಲ್ಲ. ಹೀಗಾಗಿ, ಆತನ ಮಾತಿಗೆ ಪ್ರತಿಕ್ರಿಯಿಸಬೇಕಾದಅಗತ್ಯತೆಇಲ್ಲ. ಆದಾಗ್ಯೂ, ಡಿಕೆಶಿ ಹಾಗೂ ತಮ್ಮ ಮಧ್ಯೆಯಾವುದೇರೀತಿಯ ಶೀತಲ ಸಮರ ನಡೆಯುತ್ತಿಲ್ಲಎಂದರು.